
ಮಂಗಳೂರು, ಸೆಪ್ಟಂಬರ್ .02: ನಗರದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿ 2019ರ ಡಿ.26ರಂದು ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರಿಗೆ ಬೆದರಿಕೆ ಕರೆ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬೊಂಡಂತಿಲ ತಾರಿಗುಡ್ಡೆಯ ಮುಹಮ್ಮದ್ ಶಫೀಕ್(20) ಮತ್ತು ಇನ್ನೋರ್ವ 17 ವರ್ಷದ ಬಾಲಕ ಬಂಧಿತ ಅರೋಪಿಗಳಾಗಿದ್ದಾರೆ.
ಕದ್ರಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಾಂತಾರಾಮ್ ಅವರ ಮೊಬೈಲ್‌ಗೆ ಕರೆ ಮಾಡಿದ ಆರೋಪಿಗಳು ಅವಾಚ್ಯ ಶಬ್ಧಗಳಿಂದ ಬೈದು ಜೀವಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಬಗ್ಗೆ ಶಾಂತಾರಾಮ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ್ದರು.
ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮತ್ತು ಉಪ ಪೊಲೀಸ್ ಆಯುಕ್ತ ವಿನಯ ಎ.ಗಾಂವ್ಕರ್ ಅವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬಿ.ಸಿ.ಗಿರೀಶ್, ಉಪ ನಿರೀಕ್ಷಕಿ ರೇಖಾ, ಸಿಬ್ಬಂದಿ ವರ್ಗದ ಮಾಯಾಪ್ರಭು, ವಿಜಯ ಶೆಟ್ಟಿ, ಅಭಿಷೇಕ್ ಎ.ಆರ್., ಮಂಜುನಾಥ, ರಾಜಪ್ಪ ಮತ್ತು ಅಪ್ಪಣ್ಣ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
Comments are closed.