ಕರ್ನಾಟಕ

ಸ್ಯಾಂಡಲ್ ವುಡ್’ನಲ್ಲಿ ‘ಡ್ರಗ್ಸ್’ ದಂಧೆ: ಸಿಸಿಬಿ ಎದುರು ಹಾಜರಾದ ಇಂದ್ರಜಿತ್ ಲಂಕೇಶ್- ಯಾರ ಬಣ್ಣ ಬಯಲಾಗುತ್ತೆ?

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಕೆಲ ನಟ, ನಟಿಯರು, ನಿರ್ದೇಶಕರು, ಸಂಗೀತ ನಿರ್ದೇಶಕರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದು ಈ ಬಗ್ಗೆ ನನ್ನಲ್ಲಿ ಪುರಾವೆಗಳಿವೆ, ಪೊಲೀಸರು ಭದ್ರತೆ ನೀಡಿದರೆ ಅವರ ಹೆಸರು ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಡ್ರಗ್ಸ್ ತೆಗೆದುಕೊಳ್ಳುವವರ ಪಟ್ಟಿ ಕೊಡಿ ಎಂದು ನಗರ ಅಪರಾಧ ದಳ ಪೊಲೀಸರು ನೊಟೀಸ್ ನೀಡಿದ್ದು ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿ ಎದುರು ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

ಸೊಮವಾರ ಮಧ್ಯಾಹ್ನದ ಸುಮಾರಿಗೆ ಇಂದ್ರಜಿತ್ ಲಂಕೇಶ್ ಅವರನ್ನು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿ ಅವರ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಇದಕ್ಕೂ ಮುನ್ನ ಕಚೇರಿ ಆವರಣದಲ್ಲಿ ನೆರೆದಿದ್ದ ಮಾಧ್ಯಮ ಪ್ರತಿನಿಧಿಗಳು ಇಂದ್ರಜಿತ್ ಲಂಕೇಶ್ ಅವರನ್ನು ಮಾತನಾಡಿಸಿದಾಗ, ಪೊಲೀಸರ ಮುಂದೆ ಸಾಕ್ಷಿಗಳನ್ನು ನೀಡಿ ಬರುತ್ತೇನೆ ಎಂದರು.

ಸಿಸಿಬಿ ಕಚೇರಿಗೆ ಆಗಮಿಸಿದ ಇಂದ್ರಜಿತ್ ಲಂಕೇಶ್ ಅವರ ಕೈಯಲ್ಲಿ ಒಂದಷ್ಟು ದಾಖಲೆಗಳಿದ್ದು ಅವುಗಳಲ್ಲಿ ತಾವು ಮಾಡಿರುವ ಆರೋಪಕ್ಕೆ, ನೀಡಿದ್ದ ಹೇಳಿಕೆಗೆ ಸಾಕ್ಷಿಯಾಗಿ ಪೂರಕ ಪುರಾವೆಗಳನ್ನು ತಂದಿದ್ದಾರೆ ಎನ್ನಲಾಗುತ್ತಿದೆ. ಒಂದು ಫೈಲ್ ಕೂಡ ಅವರ ಜೊತೆಯಿರುವುದು ಕಂಡುಬಂದಿದೆ.

Comments are closed.