ಕರಾವಳಿ

ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಉಡುಪಿಯ ಯುವತಿ ಸಾವು; ಪ್ರಕರಣದ ತನಿಖೆ ಸಿಒಡಿಗೆ

Pinterest LinkedIn Tumblr

ಉಡುಪಿ: ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಉಡುಪಿ ಮೂಲದ 26 ವರ್ಷದ ರಕ್ಷಾ ನಿಧನ ಹೊಂದಿದ ನಂತರ ಹಲವಾರು ಆತಂಕಗಳು ಸ್ರಷ್ಟಿಯಾಗಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ, ರಾಜ್ಯ ಗೃಹ ಸಚಿವರು, ಆರೋಗ್ಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ವಿಡಿಯೋ ಸಮಾವೇಶ ನಡೆಸಿ ರಕ್ಷಾ ಅವರ ಪ್ರಕರಣ ತನಿಖೆ ವಿಚಾರದ ಬಗ್ಗೆ ಚರ್ಚಿಸಲಾಯಿತು. ಸರ್ಕಾರದ ಆದೇಶದಂತೆ ಈ ಪ್ರಕರಣವನ್ನು ಸಿಒಡಿ ಗೆ ಹಸ್ತಾಂತರಿಸಲಾಗುತ್ತಿದೆ ಎಂದು ರಘುಪತಿ ಭಟ್ ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ತನಿಖೆಗಾಗಿ ಏಳು ಸದಸ್ಯರ ವೈದ್ಯಕೀಯ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ತಂಡದಲ್ಲಿ ಡಾ.ಚಂದ್ರಶೇಖಾ ಅಡಿಗ, ಉದಯ್ ಶಂಕರ್, ರಾಮರಾವ್, ಡಾ. ಉಮೇಶ್ ಪ್ರಭು, ಡಾ.ಸ್ಮಿತಾ ಶೆಣೈ, ಎಚ್ ಓ ಡಿ ಡಾ. ನಾಗರತ್ನ ಇವರ ಸಮಿತಿಯು ಐದು ದಿನಗಳಲ್ಲಿ ವಿವರವಾದ ವರದಿಯನ್ನು ಸಲ್ಲಿಸಬೇಕಾಗುತ್ತದೆ ಈ ಕುರಿತು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದರು.

ಕಳೆದ ಕೆಲವು ತಿಂಗಳುಗಳಿಂದ ಆರೋಗ್ಯ ಇಲಾಖೆಗಳ ಅಧಿಕಾರಿಗಳು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಆದಾಗ್ಯೂ, ಇಂತಹ ತಪ್ಪುಗಳು ಸ್ವೀಕಾರಾರ್ಹವಲ್ಲ ಮತ್ತು ಮತ್ತೆ ಜಿಲ್ಲೆಯಲ್ಲಿ ಪುನರಾವರ್ತನೆಯಾಗುವುದಿಲ್ಲ. ಇಂತಹ ಪ್ರಕರಣಗಳನ್ನು ಎದುರಿಸುವಾಗ ವೈದ್ಯರು ಜಾಗರೂಕರಾಗಿರಬೇಕು ಎಂದು ಭಟ್ ಹೇಳಿದರು.

Comments are closed.