
ಪೋರ್ಚುಗಲ್: ಕೆಲವೊಮ್ಮೆ ಸೇಡು ಎನ್ನುವುದು ಎಂಥ ವಿಕೃತ ಮನೋಭಾವಕ್ಕೆ ದೂಡುತ್ತದೆ ಎನ್ನುವುದಕ್ಕೆ ಪೋರ್ಚುಗಲ್‌ನಲ್ಲಿ ನಡೆದಿರುವ ಈ ಭಯಾನಕ ಕೊಲೆಯೇ ಕಾರಣ.
ತನ್ನ ಹೆಂಡತಿ ಬೇರೊಬ್ಬ ಪುರುಷನ ಜತೆ ಹೋಗುವುದನ್ನು ನೋಡಿದ್ದ ವ್ಯಕ್ತಿಯೊಬ್ಬ ಆಕೆಯಿಂದ ಬೇರೆಯಾದ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಆತ ಮಾಡಿದನೊಂದು ಭೀಕರ ಕೃತ್ಯ. ಇಂಥ ಕುಕೃತ್ಯ ಎಸಗಿದವನ ಹೆಸರು ಸ್ಯಾಂಡೆ ಫಿಡಾಲ್ಗೊ.
ತನ್ನ ಕೈಕೊಟ್ಟ ಪತ್ನಿಯನ್ನು ಎಳೆದುತಂದು, ತಂತಿಯಿಂದ ಕೈಕಟ್ಟಿಹಾಕಿದ ಸ್ಯಾಂಡೆ ಫಿಡಾಲ್ಗೊ, ಆಕೆಯನ್ನು ಮೊದಲು ವಿವಸ್ತ್ರಗೊಳಿಸಿದ. ನಂತರ ಆಕೆಯ ಜನನಾಂಗವನ್ನು ಹರಿತವಾದ ಚಾಕುವಿನಿಂದ ಸತತ ಆರು ಗಂಟೆ ಕಾಲ ಚುಚ್ಚಿ ವಿರೂಪಗೊಳಿಸಿದ.
ಇನ್ನೊಂದೆಡೆ, ತನ್ನ ಪ್ರೇಯಸಿಯ ಕೈಯನ್ನು ಬಲವಾಗಿ ಹಿಡಿದುಕೊಂಡಿದ್ದ ಈಗ, ಈ ಭಯಾನಕ ಕೃತ್ಯವನ್ನು ಆಕೆಗೆ ನೋಡುವಂತೆ ಒತ್ತಾಯ ಮಾಡಿದ. ತನ್ನ ಮಾಜಿ ಹೆಂಡತಿಗೆ ಈ ರೀತಿಯಾಗಿ ಸತತ ಆರುಗಂಟೆ ಕಾಲ ಈ ಘನಘೋರ ಚಿತ್ರಹಿಂಸೆ ನೀಡಿ ಆಕೆ ಸಾಯುವವರೆಗೂ ಮುಂದುವರೆಸಿದ.
ಇತ್ತ ಪ್ರೇಯಸಿ, ತನ್ನ ಪ್ರಿಯಕರನ ಈ ಭಯಾನಕ ಕೃತ್ಯವನ್ನು ನೋಡಿ ನಲುಗಿ ಹೋದಳು. ಆತನ ಹಿಡಿತದಿಂದ ಹೇಗೋ ತಪ್ಪಿಸಿಕೊಂಡು ಬಂದ ಆಕೆ ಸೀದಾ ಪೊಲೀಸರಲ್ಲಿ ಹೋಗಿ ದೂರನ್ನು ದಾಖಲು ಮಾಡಿದಳು.
ಆದರೆ ಪೊಲೀಸರು ಬರುತ್ತಲೇ ಸ್ಯಾಂಡೆ ಫಿಡಾಲ್ಗೊ ತನ್ನ ಸೇಡನ್ನು ತೀರಿಸಿಕೊಂಡಿರುವ ಸಂತೃಪ್ತಿ ಭಾವದಿಂದ ಸೇತುವೆಯ ಮೇಲಿನಿಂದ ನೆಗೆದು ಪ್ರಾಣ ಕಳೆದುಕೊಂಡ.
ಪೊಲೀಸರು ಬರುವಷ್ಟರಲ್ಲಿ ಮಹಿಳೆ ಪ್ರಾಣ ಕಳೆದುಕೊಂಡಿದ್ದಳು. ಪೊಲೀಸರ ತನಿಖೆಯಿಂದ ಮಹಿಳೆ ಸ್ಯಾಂಡೆ ಫಿಡಾಲ್ಗೊ ಜತೆ ಮದುವೆಯಾಗಿರುವಾಗಲೇ ಇನ್ನೊಬ್ಬನ ಜತೆ ಸಂಬಂಧ ಬೆಳೆಸಿದ್ದಳು. ಈ ಹಿನ್ನೆಲೆಯಲ್ಲಿ ಸಿಟ್ಟುಕೊಂಡಿದ್ದ ಸ್ಯಾಂಡೆ ಫಿಡಾಲ್ಗೊ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.
ತನ್ನ ಪತ್ನಿಯ ಮೇಲೆ ಸಂದೇಹ ಹೊಂದಿದ್ದ ಸ್ಯಾಂಡೆ ಫಿಡಾಲ್ಗೊ, ಆಕೆ ಎಲ್ಲೆಲ್ಲಿ ಹೋಗುತ್ತಾಳೆ ಎಂದು ನೋಡಲು ಜಿಪಿಎಸ್ ಅಳವಡಿಸಿದ್ದ. ಆ ನಂತರ ಆಕೆ ಬೇರೊಬ್ಬನ ಜತೆ ಸಂಬಂಧ ಹೊಂದಿರುವುದು ತಿಳಿದುಬಂದಿತ್ತು. ಇದರಿಂದ ಕೋಪಗೊಂಡಿದ್ದ ಆತ, ಆಕೆಯನ್ನು ಮುಗಿಸುವ ಅದೂ ಭಯಾನಕವಾಗಿ ಮುಗಿಸುವ ಸಂಚು ರೂಪಿಸಿ, ಆ ರೀತಿ ಮಾಡಿ ತನ್ನ ಪ್ರಾಣವನ್ನೂ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.