
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಗುಣಮುಖ ಹೊಂದುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ 61 ಸಾವಿರದ 408 ಹೊಸ ಕೇಸುಗಳು ಪತ್ತೆಯಾಗಿದ್ದು 57 ಸಾವಿರದ ಮಂದಿ 468 ಮಂದಿ ಗುಣಮುಖ ಹೊಂದಿದ್ದಾರೆ. 836 ಮಂದಿ ಸೋಂಕಿನಿಂದ ಗುಣಮುಖ ಹೊಂದದೆ ಮೃತಪಟ್ಟಿದ್ದಾರೆ. ಈ ಮೂಲಕ ಕೋವಿಡ್-19 ಸೋಂಕಿತರ ಸಂಖ್ಯೆ ದೇಶದಲ್ಲಿ 31 ಲಕ್ಷದ 06 ಸಾವಿರದ 349 ಆಗಿದೆ.
ಇದುವರೆಗೆ 23 ಲಕ್ಷದ 38 ಸಾವಿರದ 036 ಮಂದಿ ಗುಣಮುಖ ಹೊಂದಿದ್ದಾರೆ. ಅಂದರೆ ಗುಣಮುಖ ಹೊಂದಿದವರ ಪ್ರಮಾಣ ಶೇಕಡಾ 75ಕ್ಕೆ ತಲುಪಿದೆ. ದೇಶದಲ್ಲಿ ಇಲ್ಲಿಯವರೆಗೆ ಸೋಂಕಿನಿಂದ 57 ಸಾವಿರದ 542 ಮಂದಿ ಮೃತಪಟ್ಟಿದ್ದಾರೆ, ಮೃತರ ಪ್ರಮಾಣ ಶೇಕಡಾ 1.86ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಗುಣಮುಖ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಸೋಂಕಿತರ ಸಂಖ್ಯೆ ಒಟ್ಟಾರೆ ದೇಶದಲ್ಲಿ ಶೇಕಡಾ 23.24ರಷ್ಟಿದೆ.ಈ ಬಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ವೈಷ್ಣೊ ದೇವಿ ಯಾತ್ರೆಗೆ ಹೋಗುವವರು ಯಾತ್ರೆಗೆ ತೆರಳುವ 48 ಗಂಟೆಗೆ ಮುಂಚೆ ಕೊರೋನಾ ಪರೀಕ್ಷೆ ಮಾಡಿಸಿಕೊಂಡು ಅದರಲ್ಲಿ ನೆಗೆಟಿವ್ ಬಂದಿದ್ದರೆ ಮಾತ್ರ ಹೋಗಲು ಅನುಮತಿ ಸಿಗುತ್ತದೆ.
Comments are closed.