ಕರಾವಳಿ

ಕುಂದಾಪುರದ ಕೋವಿಡ್ ಹೋಂ ಕೇರ್ ಸೆಂಟರ್’ನಲ್ಲಿ ಚೌತಿ ಹಬ್ಬದ ‌ಸಿಹಿ..! (Video)

Pinterest LinkedIn Tumblr

ಕುಂದಾಪುರ: ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮನೆಯಿಂದ ದೂರವಿದ್ದು ಚೌತಿ ಹಬ್ಬವೂ ಆಚರಣೆ ಮಾಡಲಾಗದ ಸೋಂಕಿತರಿಗೆ ಸಿಹಿ ನೀಡಿ ಹಬ್ಬದ ವಾತಾವರಣ ಸೃಷ್ಟಿ ಮಾಡಿದ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ ಕಾರ್ಯಕ್ಕೆ ಉಡುಪಿ ಡಿಸಿ‌ ಜಿ. ಜಗದೀಶ್ ಪ್ರಶಂಸಿಸಿದ್ದಾರೆ.

ಯಾವುದೇ ಲಕ್ಷಣಗಳಿಲ್ಲದೆ ಕೊರೋನಾ‌ ಪಾಸಿಟಿವ್ ಬಂದು‌ ಮನೆಯಲ್ಲಿ ಇರಲು‌ ಸಮಸ್ಯೆಗೊಳಗಾಗುವ ಮಂದಿಗೆ ಅನುಕೂಲವಾಗುವಂತೆ ಕುಂದಾಪುರದ ಬಿ.ಸಿ.ಎಂ ಹಾಸ್ಟೆಲನ್ನು ಇತ್ತೀಚೆಗೆ ಕೋವಿಡ್ ಹೋಂ ಕೇರ್ ಸೆಂಟರ್ ಆಗಿ ಮಾಡಲಾಗಿದ್ದು ಪ್ರಸ್ತುತ 70 ಮಂದಿ ಸೋಂಕಿತರು ಅಲ್ಲಿದ್ದಾರೆ. ಇಂದು‌ ಮಧ್ಯಾಹ್ನ ಊಟದ ಸಮಯದಲ್ಲಿ‌ ಅಲ್ಲಿರುವ ಮಂದಿಗೆ ಲಡ್ಡು ಹಂಚಲಾಯಿತು.

ಫೇಸ್ಬುಕ್ ಖಾತೆಯಲ್ಲಿ ಆರೋಗ್ಯಾಧಿಕಾರಿಯವರ ಕಾರ್ಯಕ್ಕೆ ಡಿಸಿ ಅವರು ‌ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.