
ಸ್ಮಾರ್ಟ್ಫೋನ್ ಬಳಕೆದಾರರು ದಿನದಲ್ಲಿ ಒಮ್ಮೆಯಾದರೂ ಯ್ಯೂಟೂಬ್ ಬಳಸದೇ ಇರಲಾರರು. ಸಿನಿಮಾ ಹಾಡು ಕೇಳಲು, ಇಲ್ಲವೇ ಟ್ರೈಲರ್ ನೋಡಲು, ಯಾವುದೋ ಸುದ್ದಿ ವಾಹಿನಿ ಲೈವ್ ವೀಕ್ಷಿಸಲು ಒಮ್ಮೆಯಾದರೂ ಯ್ಯೂಟೂಬ್ ಅಪ್ಲಿಕೇಷನ್ ಬಳಸಿಯೇ ಬಳಸುತ್ತೇವೆ. ಆದರೆ ಯ್ಯೂಟೂಬ್ನಲ್ಲಿ ಬ್ಯಾಗ್ರೌಂಡ್ ಪ್ಲೇಬ್ಯಾಕ್ ಆಯ್ಕೆಯೊಂದಿದ್ದರೆ ಒಳ್ಳೆಯದಿತ್ತು ಎಂಬುದು ಅನೇಕರ ಮಾತು.
ಡೆಸ್ಕ್ಟಾಪ್ ಬಳಕೆದಾರರು ಯ್ಯೂಟೂಬ್ ಬ್ಯಾಗ್ರೌಂಡ್ ಪ್ಲೇ ಆಯ್ಕೆಯನ್ನುಸುಲಭವಾಗಿ ಬಳಸಬಹುದಾಗಿದೆ. ಹೊಸದೊಂದು ಟ್ಯಾಬ್ನಲ್ಲಿ ಯ್ಯೂಟೂವ್ ವಿಡಿಯೋ ಪ್ಲೇ ಮಾಡಿ ಬೇರೆ ಟ್ಯಾಬ್ನಲ್ಲಿ ಕೆಲಸ ಮಾಡುತ್ತಾ ಬ್ಯಾಗ್ರೌಂಡ್ನಲ್ಲಿ ಪ್ಲೇ ಮಾಡುವ ಆಯ್ಕೆಯಿದೆ. ಆದರೆ ಸ್ಮಾರ್ಟ್ಫೋನ್ ಪ್ರಿಯರಿಗೆ ಅಂತಹದೊಂದು ಆಯ್ಕೆ ಸಿಗುವುದು ಕಷ್ಟ. ಅಂತವರಿಗೆ ಸುಲಭವಾದ ಟ್ರಿಕ್ಸ್ ಇಲ್ಲಿದೆ.
ಹಂತ-1: ಆ್ಯಂಡ್ರಾಯ್ಡ್ ಬಳಕೆದಾರರು ಗೂಗಲ್ ಅಪ್ಲಿಕೇಶನ್ ತೆರೆದು ಯ್ಯೂಟೂಬ್ ಸರ್ಚ್ ಮಾಡಿರಿ, ನಿಮಗಿಷ್ಟದ ವಿಡಿಯೋವನ್ನು ಆಯ್ಕೆ ಮಾಡಿ. ನಂತರ ಮಿನಿ ಮೈಸ್ ಮಾಡಿರಿ.
ಹಂತ-2: ನಂತರ ಮತ್ತೆ ಗೂಗಲ್ ಅಪ್ಲಿಕೇಷನ್ ತೆರೆಯಿರಿ ಬಲಭಾಗದಲ್ಲಿ ಕಾಣಿಸಿಕೊಳ್ಳುವ ಮೂರು ಚುಕ್ಕಿಗಳನ್ನು ಟ್ಯಾಪ್ ಮಾಡಿರಿ. ನಂತರ ಅಲ್ಲಿರುವ ಡೆಸ್ಕ್ಟಾಪ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.
ಹಂತ-3: ಡೆಸ್ಕ್ಟಾಪ್ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ವೆಬ್ಸೈಟ್ ರಿಲೋಡ್ ಆಗುವವರೆಗೆ ತಾಳ್ಮೆವಹಿಸಿ. ಮತ್ತು ಪ್ಲೇ ಬಟನ್ ಟ್ಯಾಪ್ ಮಾಡಿರಿ.
ಹಂತ-4: ನಂತರ ಮಿನಿಮೈಸ್ ಮಾಡಿ ನೋಟಿಫಿಕೇಶನ್ ಪ್ಯಾನಲ್ ತೆರೆಯಿರಿ.
ಹಂತ-5: ನೋಟಿಫಿಕೇಶನ್ ತೆರೆದಂತೆ ವಿಡಿಯೋ ಪ್ಲೇ ಮಾಡುವ ಆಯ್ಕೆ ಕಾಣಸಿಗುತ್ತದೆ. ಟ್ಯಾಪ್ ಮಾಡುವ ಮೂಲಕ ಬ್ಯಾಗ್ರೌಂಡ್ ಪ್ಲೇ ಮಾಡಬಹುದಾಗಿದೆ.
(ಆ್ಯಂಡ್ರಾಯ್ಡ್ ಬಳಕೆದಾರರು ಈ ರೀತಿಯಾಗಿ ಯ್ಯೂಟೂಬ್ ವಿಡಿಯೋವನ್ನು ಬ್ಯಾಗ್ರೌಂಡ್ ಪ್ಲೇ ಮಾಡಲು ಸುಲಭ ಟ್ರಿಕ್ಸ್ ಇದಾಗಿದೆ)
Comments are closed.