
ಮಂಗಳೂರು : ಹಿರಿಯ ದೈವಾರಾಧಕ ಪಚ್ಚನಾಡಿ ನಿವಾಸಿ ಪದ್ಮನಾಭ ಮಡಿವಾಳ (76ವ.) ಆ.17ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಕೋಡಿಕಲ್ ಬಂಗಾಡಿತ್ತಾಯ ದೈವದ ಎಣ್ಣೆ ಹಿಡಿದ ಅವರು ಪಂಚದೀವಟಿಗೆ ಹಿಡಿಯುವ ದೈವಾರಾಧಕ ರಾಗಿದ್ದರು.
ಉರ್ವ ಮಾರಿಯಮ್ಮ, ಕದ್ರಿ ಮಲರಾಯ, ಕೊಡಕ್ಕಲ್ ವೈದ್ಯನಾಥ ಮೊದಲಾದ ರಾಜನ್ ದೈವಗಳ ಕಾಯಕದಲ್ಲಿ ತೊಡಗಿಕೊಂಡಿದ್ದ ಅವರು ಪತ್ನಿ, ಪುತ್ರ ,ಪುತ್ರಿ , ಸೊಸೆಯನ್ನು ಅಗಲಿರುವರು.
ಕದ್ರಿ ಬ್ರಹ್ಮಕಲಶೋತ್ಸವ ಸಮಿತಿ, ಸಂಸ್ಕಾರ ಭಾರತಿ ಮಂಗಳೂರು,ವಿಶ್ವ ತುಳು ಆಯನ ಕೂಟ ಸಹಿತ ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿದೆ.
Comments are closed.