
(ಸಾಂದರ್ಭಿಕ ಚಿತ್ರ)
ಮಂಗಳೂರು : ನಗರದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಸೊತ್ತು ಸಹಿತ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅಹಮ್ಮದ್ ಬಶೀರ್(45) ಎಂದು ಗುರುತಿಸಲಾಗಿದೆ. ಆರೋಪಿಯಿಂದ ರೂ. 80 ಸಾವಿರ ಮೌಲ್ಯದ 2 ಕೆ.ಜಿ.120 ಗ್ರಾಂ ಗಾಂಜಾ ಮತ್ತು ಗಾಂಜಾ ಮಾರಾಟಕ್ಕೆ ಬಳಸಿದ ರೂ. 50 ಸಾವಿರ ಮೌಲ್ಯದ ದ್ವಿಚಕ್ರ ವಾಹನವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಆರೋಪಿ ನಗರದ ಫಳ್ನೀರ್ ಉಷಾ ಹೋಟೇಲ್ ರಸ್ತೆ ಪಕ್ಕದಲ್ಲಿರುವ ಜಿ.ಐ ಬೇಕರಿ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದಾನೆಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿ, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ದ ಎನ್.ಡಿ.ಪಿ.ಎಸ್. ಕಾಯಿದೆಯಡಿ ಪ್ರಕರಣ ದಾಖಲಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರು ಮಂಗಳೂರು ನಗರ, ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ), ಉಪ ಪೊಲೀಸ್ ಆಯುಕ್ತರು (ಕ್ರೈಂ ಆಂಡ್ ಟ್ರಾಫಿಕ್) ಮಂಗಳೂರು ನಗರ, ಎಸಿಪಿ ಸೆಂಟ್ರಲ್ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್ಸ್ ಪೆಕ್ಟರ್ ಗೋವಿಂದರಾಜು ರವರ ನೇತೃತ್ವದಲ್ಲಿ ಪಿ.ಎಸ್.ಐ ನಾಗರಾಜ್ ಮತ್ತು ಸಿಬ್ಬಂದಿಗಳಾದ ಸುಜನ್ ಶೆಟ್ಟಿ, ಮಹೇಶ್, ಹಾಗೂ ಸೆಂಟ್ರಪ್ ಉಪ ವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿಗಳಾದ ಗಂಗಾಧರ, ವೆಲೆಸ್ಟಿನ್ ಡಿಸೋಜಾ, ಸಂತೋಷ್ , ಕಿಶೋರ್ , ನಾಗರಾಜ, ಅಂಜನಪ್ಪ , ಬೀಮಪ್ಪ, ರಮೇಶ ರವರ ಸಹಕಾರದೊಂದಿಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
Comments are closed.