ಅಂತರಾಷ್ಟ್ರೀಯ

ಲೆಬನಾನ್‌ ಬಂದರು ಪ್ರದೇಶದಲ್ಲಿ ಭಾರೀ ಸ್ಫೋಟ; ಕನಿಷ್ಠ 10 ಮಂದಿ ಸಾವು, ನೂರಾರು ಜನರಿಗೆ ಗಾಯ

Pinterest LinkedIn Tumblr

ಲೆಬನಾನ್‌ ಬಂದರು ಪ್ರದೇಶದಲ್ಲಿ ಭಾರೀ ಸ್ಫೋಟ; ಕನಿಷ್ಠ 10 ಮಂದಿ ಸಾವು, ನೂರಾರು ಜನರಿಗೆ ಗಾ

ಸ್ಪೋಟದ ರುವಾರಿ ಯಾರು? ಮತ್ತು ಈ ಸ್ಪೋಟಕ್ಕೆ ಕಾರಣ ಏನು? ಎಂಬ ಕುರಿತು ಈವರೆಗೆ ತಿಳಿದುಬಂದಿಲ್ಲ ಎಂದು ಲೆಬನಾನ್ ಸರ್ಕಾರದ ಅಧಿಕಾರಿಗಳು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

 

ಬೈರುತ್‌ (ಆಗಸ್ಟ್‌ 04); ಲೆಬನಾನ್ ರಾಜಧಾನಿ ಬೈರುತ್ ನಗರದ ಬಂದರು ಪ್ರದೇಶದಲ್ಲಿ ಇಂದು ಸಂಭವಿಸಿರುವ ಭಾರೀ ಸ್ಟೋಟದಿಂದಾಗಿ ಕನಿಷ್ಠ ಹತ್ತು ಮಂದಿ ಸಾವನ್ನಪ್ಪಿದ್ದು, ನೂರಾರು ಜನ ಗಾಯಗೊಂಡಿದ್ದಾರೆ ಎಂದು ಆ ದೇಶದ ಆರೋಗ್ಯ ಸಚಿವ ಹಮದ್ ಹಸನ್ ತಿಳಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಯುದ್ಧಭೂಮಿಯಂತಾಗಿರುವ ಲೆಬನಾನ್‌ನಲ್ಲಿ ಕಳೆದ ಕೆಲ ದಿನಗಳಿಂದ ಗುಂಡಿನ ಮೊರೆತ ನಿಶ್ಯಬ್ಧತೆಯನ್ನು ತಬ್ಬಿತ್ತು. ಆದರೆ, ಇಂದು ಬೈರುತ್ ನಗರದ ಬಂದರಿನಲ್ಲಿ ಸಂಭವಿಸಿರುವ ಭಾರೀ ಸ್ಪೋಟವು ಲೆಬನಾನ್‌ನಲ್ಲಿ ಮತ್ತೆ ಆಘಾತದ ತರಂಗಗಳನ್ನು ಎಬ್ಬಿಸಿವೆ. ಈ ಸ್ಪೋಟದಲ್ಲಿ ಕನಿಷ್ಠ ಹತ್ತು ಮಂದಿ ಸತ್ತಿದ್ದು, ನೂರಾರು ಜನ ಗಾಯಗೊಂಡಿದ್ದಾರೆ. ಇದಷ್ಟೇ ಅಲ್ಲದೆ ಹಲವಾರು ಮನೆಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.

Comments are closed.