ಕೊರೋನಾ ಬಂದುಹೋದ ಕೂಡಲೇ ನೀವು ಸೇಫ್ ಅಲ್ಲ; ಸೋಂಕು ಗುಣವಾದರೂ ಹೃದಯಕ್ಕೆ ಪೆಟ್ಟು ಕೊಟ್ಟಿರುತ್ತೆ ಈ ವೈರಸ
ಜರ್ಮನಿಯ ವಿಜ್ಞಾನಿಗಳ ತಂಡ ಮಾಡಿದ ಸಂಶೋಧನೆಯಿಂದ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಅಲ್ಲಿನ ತಜ್ಞರು ಕೋವಿಡ್ ಗೆ ತುತ್ತಾಗಿ ಗುಣಮುಖರಾದ 100 ಜನರ ಎಂಆರ್ಐ ಮಾಡಿದ್ದಾರೆ. ಇವರಲ್ಲಿ 78 ಜನರಿಗೆ ಹೃದಯ ಸಂಬಂಧಿ ಸಮಸ್ಯೆ ಮತ್ತು 60 ಜನರಿಗೆ ಹೃದಯದಲ್ಲಿ ಊತ ಅಥವಾ ಇನ್ ಫ್ಲಮೇಶನ್ ಉಂಟಾಗಿರುವುದು ಕಂಡುಬಂದಿದೆ.
ಕೊರೋನಾ ಸೋಂಕು ಬಂದು ಹೋದವರ ದೇಹದಲ್ಲಿ ಆಂಟಿಬಾಡಿ ಉತ್ಪತ್ತಿಯಾಗಿರುತ್ತದೆ. ಅಂಥವರಿಗೆ ಮರಳಿ ಸೋಂಕು ಬರುವ ಸಾಧ್ಯತೆ ತೀರಾ ವಿರಳ. ಕೊರೋನಾ ಸಂಬಂಧಿತ ಬೇರೆ ಸಮಸ್ಯೆಗಳಿಂದಲೂ ಅವರು ಮುಕ್ತ ಎನ್ನುವ ಭಾವನೆ ಇಲ್ಲಿವರೆಗೆ ಇತ್ತು. ಕೊರೋನಾ ಬಂದು ಹೋದರೆ ನಾವಿನ್ನು ಆರಾಮಾಗಿರಬಹುದು ಎಂದುಕೊಂಡಿದ್ದರು ಜನ. ಆದರೆ ಇದೆಲ್ಲವೂ ತಲೆಕೆಳಗಾಗುವಂಥಾ ಸಂಶೋಧನೆಯ ವರದಿಯೊಂದು ಹೊರಬಿದ್ದಿದೆ.
ಜರ್ಮನಿಯ ವಿಜ್ಞಾನಿಗಳ ತಂಡ ಮಾಡಿದ ಸಂಶೋಧನೆಯಿಂದ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಅಲ್ಲಿನ ತಜ್ಞರು ಕೋವಿಡ್ ಗೆ ತುತ್ತಾಗಿ ಗುಣಮುಖರಾದ 100 ಜನರ ಎಂಆರ್ಐ ಮಾಡಿದ್ದಾರೆ. ಇವರಲ್ಲಿ 78 ಜನರಿಗೆ ಹೃದಯ ಸಂಬಂಧಿ ಸಮಸ್ಯೆ ಮತ್ತು 60 ಜನರಿಗೆ ಹೃದಯದಲ್ಲಿ ಊತ ಅಥವಾ ಇನ್ ಫ್ಲಮೇಶನ್ ಉಂಟಾಗಿರುವುದು ಕಂಡುಬಂದಿದೆ. ಅಂದರೆ ಸೋಂಕು ಬಂದು ಹೋದವರಲ್ಲಿ ಒಟ್ಟು 60-70% ಜನರಿಗೆ ಹೃದಯ ಸಂಬಂಧಿ ಸಮಸ್ಯೆಗಳು ಕಂಡುಬಂದಿವೆ.
ಕೋವಿಡ್ ಸೋಂಕಿತರಿಗೆ ಮುಂದಿನ ದಿನಗಳಲ್ಲಿ ಯಾವ ಬಗೆಯ ಆರೋಗ್ಯ ಸಮಸ್ಯೆಗಳು ಕಾಡಬಹುದು ಎನ್ನುವುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇದೀಗ ಬಂದಿರುವ ಹೃದಯ ಸಂಬಂಧಿ ಅನಾರೋಗ್ಯ ಗುಣಮುಖರಾದ ಜನರಲ್ಲಿ ಭಯ ಹುಟ್ಟಿಸಿದೆ. ಸದ್ಯ ಈ ಸಂಶೋಧನೆಯನ್ನು ಮತ್ತಷ್ಟು ವಿಸ್ತಾರವಾಗಿ ನಡೆಸಲು ನಿರ್ಧರಿಸಲಾಗಿದೆ. ಬೇರೆ ಬೇರೆ ದೇಶಗಳ ಮತ್ತಷ್ಟು ಜನರ ಪರೀಕ್ಷೆ ಮೂಲಕ ಈ ಸಂಶೋಧನೆಗೆ ಮತ್ತಷ್ಟು ಪುಷ್ಟಿ ದೊರೆಯಲಿದೆ.
ಹಾಗಾಗಿ ಕೊರೋನಾ ಬಂದು ಹೋದವರು ಬಚಾವ್ ಅಲ್ಲ, ಬರದಂತೆ ತಡೆಯುವುದೇ ಬುದ್ಧಿವಂತಿಕೆ ಎನ್ನುತ್ತಿದ್ದಾರೆ ತಜ್ಞರು. ಸಾಮಾಜಿಕ ಅಂತರ, ಸ್ವಚ್ಛತೆ, ಮಾಸ್ಕ್ ಬಳಕೆಯಷ್ಟೇ ಕೊರೋನಾದಿಂದ ನಮ್ಮನ್ನು ಕಾಪಾಡಬಲ್ಲ ದಾರಿಗಳು ಎನ್ನುವುದನ್ನು ಜನ ಮರೆಯಬಾರದು.

Comments are closed.