ರಾಷ್ಟ್ರೀಯ

ದೆಹಲಿ ಗಲಭೆ ತಪ್ಪೊಪ್ಪಿಕೊಂಡ ತಾಹಿರ್ ಹುಸೇನ್

Pinterest LinkedIn Tumblr


ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆದಿದ್ದ ಗಲಭೆ ಹಿಂದೆ ತನ್ನ ಕೈವಾಡವಿರುವುದನ್ನು ಆಮ್ ಆದ್ಮಿಯ ಉಚ್ಚಾಟಿತ ಸದಸ್ಯ ತಾಹಿರ್ ಹುಸೇನ್ ಕೊನೆಗೂ ಒಪ್ಪಿಕೊಂಡಿದ್ದಾನೆ. ಹಿಂದುಗಳಿಗೆ ಪಾಠ ಕಲಿಸುವುದಕ್ಕಾಗಿ ಹಣ ಮತ್ತು ರಾಜಕೀಯ ಪ್ರಭಾವ ಬಳಸಿಕೊಂಡು ಗಲಭೆಗೆ ತಾನೇ ಪ್ರಚೋದನೆ ನೀಡಿದ್ದಾಗಿ ವಿಶೇಷ ತನಿಖಾ ತಂಡದ ಎದುರು ಬಾಯ್ಬಿಟ್ಟಿದ್ದಾನೆ.

ದೆಹಲಿಯಲ್ಲಿ ನಡೆದ ಗಲಭೆಗೆ ಜೆಎನ್​ಯುು ವಿದ್ಯಾರ್ಥಿ ಉಮರ್ ಖಲೀದ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಡ್ಯಾನಿಶ್ ಹಾಗೂ ಮತ್ತಿತರರ ನೆರವು ಪಡೆಯಲಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಮೊದಲು ಗಲಭೆ ಸೃಷ್ಟಿಸುವುದಕ್ಕಾಗಿಯೇ ಹಲವು ಬಾರಿ ಸಭೆ ನಡೆಸಲಾಗಿತ್ತು. ಹಿಂಸಾಚಾರ ನಡೆಸುವುದಕ್ಕಾಗಿ ಪೆಟ್ರೋಲ್ ಬಾಂಬ್, ಕಲ್ಲು, ಇನ್ನಿತರ ವಸ್ತುಗಳನ್ನು ತನ್ನ ಮನೆಯ ಮೇಲೆ ಸಂಗ್ರಹಿಸಿಡಲಾಗಿತ್ತೆಂದು ತಾಹೀರ್ ಪೊಲೀಸರಿಗೆ ತಿಳಿಸಿದ್ದಾನೆ.

ಸುಪ್ರೀಂಕೋಟ್​ನ ರಾಮಮಂದಿರ ತೀರ್ಪ, ಆರ್ಟಿಕಲ್ 370 ರದ್ದತಿ, ಪೌರತ್ವ ತಿದ್ದುಪಡಿ ಕಾನೂನಿನ ಜಾರಿಯಿಂದಾಗಿ ತಾನು ಆಕ್ರೋಶಗೊಂಡಿದ್ದೆ. ಹೀಗಾಗಿಯೇ ಗಲಭೆಗೆ ಸಂಚು ರೂಪಿಸಿದ್ದೆ ಎಂದು ಹೇಳಿದ್ದಾನೆ.

Comments are closed.