ಕರ್ನಾಟಕ

ರಾಜ್ಯದಲ್ಲಿ ಇಂದು(ರವಿವಾರ) 453 ಕೊರೋನಾ ಪ್ರಕರಣಗಳು ಪತ್ತೆ; 5 ಸಾವು

Pinterest LinkedIn Tumblr


ಬೆಂಗಳೂರು(ಜೂನ್ 21): ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯಾದ್ಯಂತ 453 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಈವರೆಗೆ ದಾಖಲಾಗಿರುವ ಕೊರೋನಾ ಪ್ರಕರಣಗಳ ಸಂಖ್ಯೆ 9,150ಕ್ಕೆ ಬಂದು ನಿಂತಿದೆ. ಇಂದು ಒಂದೇ ಐದು ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 137 ತಲುಪಿದೆ.

ಮುಂಬೈ ಮತ್ತು ಚೆನ್ನೈನಂತೆ ಬೆಂಗಳೂರು ಕೂಡ ಕೊರೋನಾ ಹಾಟ್​ಸ್ಪಾಟ್ ಆಗುತ್ತಿರುವುದು ಬಹಳ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಇವತ್ತು ಒಂದೇ ದಿನ ಬೆಂಗಳೂರಿನಲ್ಲಿ 196 ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳಲ್ಲಿ ರಾಜ್ಯದಲ್ಲಿ ಮತ್ತೆ ನಂಬರ್ ಒನ್ ಸ್ಥಾನಕ್ಕೇರಿದೆ. ಬೆಂಗಳೂರಿನಲ್ಲಿ ಈವರೆಗೆ ದಾಖಲಾಗಿರುವ ಕೊರೋನಾ ಪ್ರಕರಣಗಳ ಸಂಖ್ಯೆ 1,272ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳೂ 796 ತಲುಪಿವೆ. ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲೇ ಸಾವಿನ ಪ್ರಮಾಣ ಹೆಚ್ಚಿದೆ. ಇಲ್ಲಿ 64 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಹೆಚ್ಚೂಕಡಿಮೆ ಅರ್ಧದಷ್ಟು ಸಾವು ಬೆಂಗಳೂರಿನಲ್ಲೇ ಆಗಿದೆ.

ಮೈಸೂರಿನಲ್ಲಿ ಇವತ್ತು ಬೆಳಕಿಗೆ ಬಂದ 18 ಪ್ರಕರಣಗಳಲ್ಲಿ 9 ಮಂದಿ ಬೆಂಗಳೂರಿಗೆ ಹೋಗಿಬಂದವರೇ ಆಗಿದ್ದಾರೆ. ಈಗ ಬೆಂಗಳೂರು ಅಪಾಯಕಾರಿ ಸ್ಥಳವಾಗಿ ಪರಿವರ್ತಿತವಾಗುತ್ತಿದೆ. ಮುಂಬೈನಿಂದ ಬಂದವರಿಂದ ರಾಜ್ಯದಲ್ಲಿ ಸೋಂಕು ಹೆಚ್ಚಾಗಿತ್ತು. ಈಗ ಬೆಂಗಳೂರಿಗರಿಂದ ಬೇರೆ ಜಿಲ್ಲೆಯವರಿಗೆ ಕಂಟಕವಾಗುತ್ತಿದೆ.

ಜೂನ್ 20 ಸಂಜೆ 5ರಿಂದ ಜೂನ್ 21 ಸಂಜೆ 5ವರೆಗೆ ಬೆಳಕಿಗೆ ಬಂದ ಪ್ರಕರಣಗಳು:

ಒಟ್ಟು ಪ್ರಕರಣ: 453
ಬೆಂಗಳೂರು 196
ಬಳ್ಳಾರಿ 40
ಕಲಬುರ್ಗಿ 39
ವಿಜಯಪುರ 39
ಮೈಸೂರು 18
ಗದಗ 18
ಧಾರವಾಡ 15
ಬಾಗಲಕೋಟೆ 14
ಬೀದರ್ 13
ಇತರೆ 61

Comments are closed.