ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಮತ್ತೊಬ್ಬ ವ್ಯಕ್ತಿಯನ್ನು ಬಲಿ ಪಡೆದಿದೆ. ಮಹಾರಾಷ್ಟ್ರದಿಂದ ಗುರುವಾರವಷ್ಟೇ ಉಡುಪಿಗೆ ಆಗಮಿಸಿದ್ದ ಜಿಲ್ಲೆಯ ತೆಕ್ಕಟ್ಟೆ ಭಾಗದ 54 ವರ್ಷ ಪ್ರಾಯದ ವ್ಯಕ್ತಿ ಮನೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದು ಆತನಿಗೆ ಕೊರೋನಾ ಪಾಸಿಟಿವ್ ಇರುವುದು ಗಂಟಲು ದ್ರವ ಪರೀಕ್ಷೆಯಲ್ಲಿ ಸಾಭೀತಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ಕುಂದಾಪುರದಲ್ಲಿ ಶುಕ್ರವಾರ ಸಂಜೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಇದು ಎರಡನೇ ಸಾವಾಗಿದ್ದು ಮೃತ ವ್ಯಕ್ತಿ ಸೇರಿದಂತೆ ನಾಲ್ಕು ಮಂದಿ ಗುರುವಾರ ಮಧ್ಯಾಹ್ನ ಮಹಾರಾಷ್ಟ್ರದಿಂದ ಕುಂದಾಪುರಕ್ಕೆ ಬಂದಿದ್ದರು. ಬಳಿಕ ಅವರನ್ನು ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪರೀಕ್ಷೆಗೊಳಪಡಿಸಿದ್ದು ಸೋಂಕಿನ ಯಾವುದೇ ಲಕ್ಷಗಳಿಲ್ಲದ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕಳಿಸಿ ಮನೆಯಲ್ಲೇ ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಆದರೆ ಗುರುವಾರ ಸಂಜೆ ಆತ ಮನೆಯಲ್ಲೇ ಸಾವನ್ನಪ್ಪಿದ್ದು ಮರಣಕ್ಕೆ ಕಾರಣ ಪೋಸ್ಟ್ ಮಾರ್ಟಂ ನಿಂದ ತಿಳಿಯಬೇಕು. ಆದರೆ ಗಂಟಲ ದ್ರವ ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್ ಇರೋದು ಗೊತ್ತಾಗಿದೆ ಎಂದಿದ್ದಾರೆ.

(ಜಿಲ್ಲಾಧಿಕಾರಿ ಜಿ. ಜಗದೀಶ್ )
ಮೃತ ವ್ಯಕ್ತಿಯನ್ನು ಮನೆಯಿಂದ ಶಿಪ್ಟ್ ಮಾಡುವುದು ಸೇರಿದಂತೆ ಪೋಸ್ಟ್ ಮಾರ್ಟಂ ಪ್ರಕ್ರಿಯೆಗಳೆಲ್ಲವೂ ಪಿಪಿಇ ಕಿಟ್ ಧರಿಸಿಯೇ ಮಾಡಲಾಗಿದೆ. ಸದ್ಯ ಮನೆ ಸಂಪೂರ್ಣ ಸೀಲ್ ಡೌನ್ ಮಾಡಿದ್ದು ಕಂಟೋನ್ಮೆಂಟ್ ಝೋನ್, ಬಪರ್ ಝೋನ್ ಮಾಡಿದ್ದೇವ. ಆ ವ್ಯಕ್ರಿಯೊಂದಿಗೆ ಬಂದ ಉಳಿದ ಮೂವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.