ಮಂಗಳೂರು : ಕೇಂದ್ರ ಸರ್ಕಾರವು 2003ರ ವಿದ್ಯುತ್ ಕಾಯ್ದೆಗೆ ಪ್ರಸ್ತಾಪಿತ ತಿದ್ದುಪಡಿಯನ್ನು ತರಲು ಹೊರಟಿರುವುದು, ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ/ ಖಾಸಗೀಕರಣ ಮಾಡುತ್ತಿರಿವುದನ್ನು ವಿರೋಧಿಸಿ ಕವಿಪ್ರನಿ ನೌಕರರ ಸಂಘ ಮತ್ತು ಅಸೋಸಿಯೇಷನ್ ಗಳ ಒಕ್ಕೂಟ ದೇಶವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದೇ ವೇಳೆ ಮಂಗಳೂರಿನಲ್ಲೂ ಕೆ.ಪಿ.ಟಿಸಿ.ಎಲ್ ರಾಜ್ಯ ನೌಕರರ ಸಂಘದ ನೌಕರರು/ ಅಧಿಕಾರಿಗಳು ಪ್ರತಿಭಟನೆ ನಡೆಸಿದರು.
ಕೆ.ಪಿ.ಟಿಸಿ.ಎಲ್ ರಾಜ್ಯ ನೌಕರರ ಸಂಘದ ಉಪಾಧ್ಯಕ್ಷ ಯಚ್.ಯಸ್ ಗುರುಮೂರ್ತಿ ಅವರ ನೇತ್ರತ್ವದಲ್ಲಿ ಅತ್ತಾವರ ಮೆಸ್ಕಾಂ ಕಚೇರಿ ಮುಂಭಾಗ ಕ್ಕೂಟದ ಸದಸ್ಯರೆಲ್ಲರೂ ಬಲಗೈಗೆ ಕಪ್ಪುಪಟ್ಟಿ (ಬ್ಯಾಡ್ಜ್) ಧರಿಸಿ ಒಂದು ದಿನದ ಸಾಂಕೇತಿಕ ಪ್ರತಿಭಟನೆಯನು ನಡೆಸಿ ಸರ್ಕಾರದ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಯಚ್.ಯಸ್ ಗುರುಮೂರ್ತಿ ಅವರು, ಕೇಂದ್ರ ಸರ್ಕಾರವು 2003ರ ವಿದ್ಯುತ್ ಕಾಯ್ದೆಗೆ ಪ್ರಸ್ತಾಪಿತ ತಿದ್ದುಪಡಿಯನ್ನು ತರಲು ಹೊರಟಿರುವುದು, ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ/ ಖಾಸಗೀಕರಣ ಮಾಡುತ್ತಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದ್ದು, ಇದಕ್ಕೆ ನಮ್ಮ ವಿರೋಧವಿದೆ.
ಕೇಂದ್ರ ಸರ್ಕಾರದ ಈ ಧೋರಣೆಯನ್ನು ವಿರೋಧಿಸಿ ಈಗಾಗಲೇ ದೇಶವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತರು, ಜನಸಾಮಾನ್ಯರಿಗೂ ಇದರಿಂದ ಹೊರೆಯಾಗುವುದರಿಂದ ಕೇಂದ್ರ ಸರ್ಕಾರವು ಈ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ ಹಾಗೂ ಖಾಸಗೀಕರಣ ಬೇಡ, 2003ರ ವಿದ್ಯುತ್ ಕಾಯ್ದೆ ಪ್ರಸ್ತಾಪಿತ ತಿದ್ದುಪಡಿ 2020 ಬೇಡವೇ ಬೇಡ ಎಂದು ಪ್ರತಿಭಟನೆಕಾರರು ಈ ವೇಳೆ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಂಜಪ್ಪ, ಅಧೀಕ್ಷಕ ಇಂಜಿನಿಯರ್ ಅತ್ತಾವರ, ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣರಾಜ್, ಕೆ.ಪಿ.ಟಿಸಿ.ಎಲ್ ರಾಜ್ಯ ನೌಕರರ ಸಂಘದ ಕೇಂದ್ರ ಸಾಮಿತಿ ಸದಸ್ಯ ಸಂತೋಷ್ ಕುಮಾರ್ ಮುಂತಾದವರು ಮಾತನಾಡಿದರು.

Comments are closed.