ಕುಂದಾಪುರ: ತಾಲೂಕಿನ ಆಜ್ರಿ ಗ್ರಾಮದ ಆಜ್ರಿ ಪೇಟೆಯಲ್ಲಿರುವ ಹೋಟೆಲ್ವೊಂದರಲ್ಲಿ ದಲಿತ ಯುವಕನೊಬ್ಬನಿಗೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹರೀಶ್ ಶೆಟ್ಟಿ ಕೊಕ್ಕಡ ಹಾಗೂ ಅಭಿಷೇಕ್ ಎನ್ನುವರು ಬಂಧಿತ ಆರೋಪಿಗಳು.

ಆಜ್ರಿಯಲ್ಲಿ ದೂರುದಾರ ವ್ಯಕ್ತಿ ಇದ್ದ ವೇಳೆ ಅಲ್ಲಿಗೆ ಬಂದ ಆರೋಪಿಗಳು ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿರುವುದಲ್ಲದೆ, ಎದೆಯ ಮೇಲೆ ಒದ್ದು, ಹೆಲ್ಮೆಟ್ನಿಂದ ಭುಜಕ್ಕೆ ಹಲ್ಲೆ ಮಾಡಿ, ಬಟ್ಟೆಯನ್ನು ಹರಿದು ಹಾಕಿರುವುದಾಗಿ ಆಜ್ರಿಯ ಗ್ರಾಮದ ನೀರ್ಜೆಡ್ಡು ನಿವಾಸಿ ಹರ್ಷ ದೂರು ನೀಡಿದ್ದಾರೆ.
ನಟೋರಿಯಸ್ ಆರೋಪಿ…
ಇತ್ತೀಚೆಗೆ ನೇರಳಕಟ್ಟೆ ಭಾಗದಲ್ಲಿ ನಡೆದ ಕೊಲೆ ಯತ್ನ ಪ್ರಕರಣವೊಂದರಲ್ಲಿ ಕೂಡ ಹರೀಶ್ ಶೆಟ್ಟಿ ಆರೋಪಿಯಾಗಿದ್ದು ನಿರೀಕ್ಷಣಾ ಜಾಮೀನು ಪಡೆದು ಹೊರಬಂದಿದ್ದ. ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದ ಆತ ಕೃತ್ಯ ನಡೆಸಿ ಮನೆ ಸಮೀಪದ ಕಾಡಿನಲ್ಲಿ ಅವಿತುಕೊಳ್ಳುವ ಪರಿಪಾಠ ಹೊಂದಿದ್ದ.
ಆರೋಪಿ ಹರೀಶ್ ಶೆಟ್ಟಿಯನ್ನು ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಶಂಕರನಾರಾಯಣ ಪಿಎಸ್ಐ ಶ್ರೀಧರ್ ನಾಯ್ಕ್ ನೇತೃತ್ವದ ಪೊಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಹರ್ಷ ಅವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Comments are closed.