ಕರಾವಳಿ

ಉಡುಪಿಯಲ್ಲಿ‌ ನಾಳೆ ಕಟ್ಟುನಿಟ್ಟಿನ ಲಾಕ್ ಡೌನ್- ಅನಗತ್ಯ ತಿರುಗಾಡಿದ್ರೆ ಲಾಠಿ ಮಾತನಾಡುತ್ತೆ: ಡಿಸಿ ಜಿ.ಜಗದೀಶ್

Pinterest LinkedIn Tumblr

ಉಡುಪಿ: ನಾಲ್ಕನೆ ಹಂತದ ಲಾಕ್ ಡೌನ್ ಸದ್ಯ ಜಾರಿಯಲ್ಲಿದ್ದು ಭಾನುವಾರ ಸಂಪೂರ್ಣ ಕರ್ಫ್ಯೂ ಮಾದರಿಯಲ್ಲಿ ಲಾಕ್ ಡೌನ್ ಮಾಡುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಆದೇಶದ ಹಿನ್ನೆಲೆ ಉಡುಪಿ ಜಿಲ್ಲೆಯಲ್ಲಿ ಭಾನುವಾರ ಕರ್ಫ್ಯೂ ಕಟ್ಟುನಿಟ್ಟಾಗಿ ನಡೆಯಲಿದೆ.

ಉಡುಪಿಯಲ್ಲಿ 36 ಗಂಟೆ ಕಠಿಣ ಕರ್ಫ್ಯೂ ಜಾರಿಯಲ್ಲಿರುತ್ತದೆ. ಮೆಡಿಕಲ್, ಹಾಲು ಪೇಪರ್ ಮಾತ್ರ ಸಿಗುತ್ತದೆ. ತರಕಾರಿ, ಮಾಂಸ ಹಾಗೂ ದಿನಸಿ ಸಿಗಲ್ಲ. ಅಗತ್ಯ ಎಲ್ಲಾ ವಸ್ತುಗಳನ್ನು ಇವತ್ತೇ ಖರೀದಿ ಮಾಡಿ. ಭಾನುವಾರಕ್ಕೆ ಬೇಕಾದ ಎಲ್ಲವನ್ನೂ ಖರೀದಿಸಿ ಇಟ್ಟುಕೊಳ್ಳಿ ಎಂದು ಉಡುಪಿ ಡಿಸಿ ಜಿ. ಜಗದೀಶ್ ಜನರಿಗೆ ಸಲಹೆ ನೀಡಿದ್ದಾರೆ.

ಅನಗತ್ಯ ಓಡಾಡಿದ್ರೆ ಲಾಠಿ ರುಚಿ: ಡಿಸಿ
ಅನಗತ್ಯವಾಗಿ ಯಾರೂ ರಸ್ತೆಯಲ್ಲಿ ಓಡಾಡಬೇಡಿ. ಸುಮ್ನೆ ಓಡಾಡಿದ್ರೆ ಪೊಲೀಸರ ಲಾಠಿಗಳು ಮಾತನಾಡುತ್ತವೆ ಎಂದು ಉಡುಪಿ ಡಿಸಿ ಜಿ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

Comments are closed.