
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಮಾಂಗಲ್ಯಂ ತಂತು ನಾನೇನ’ ಧಾರಾವಾಹಿ ಶಾಶ್ವತವಾಗಿ ತನ್ನ ಪ್ರಸಾರ ನಿಲ್ಲಿಸಲಿದೆಯಂತೆ. ಇತ್ತೀಚೆಗಷ್ಟೇ ಈ ಧಾರಾವಾಹಿ 500 ಸಂಚಿಕೆಗಳನ್ನು ಪೂರೈಸಿತ್ತು. ಇನ್ನು ವಾಹಿನಿ, ಧಾರಾವಾಹಿ ತಂಡದಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಒಂದು ಹುಡುಗ ಮತ್ತು ಹುಡುಗಿಯನ್ನು ವಿಧಿ ಒಟ್ಟಿಗೆ ಸೇರಿಸುವುದು, ಪದೇ ಪದೇ ಒಂದು ಮಾಡಿಸುತ್ತದೆ. ಆದರೆ ಇವರಿಬ್ಬರು ಒಂದಾಗಲು ಹಲವು ಸಮಸ್ಯೆಗಳು ಎದುರಾಗುತ್ತವೆ. ಈ ಜೋಡಿ ಒಂದಾಗುತ್ತದೆಯೋ ಇಲ್ಲವೋ, ಸವಾಲುಗಳನ್ನು ಹೇಗೆ ಎದುರಿಸುತ್ತದೆ ಎಂಬುದೇ ಧಾರಾವಾಹಿಯ ಕಥೆಯಾಗಿತ್ತು. ಶ್ರಾವಣಿ, ತೇಜಸ್ವಿ ಎಂಬ ಪಾತ್ರದ ಸುತ್ತವೇ ಕಥೆ ಸಾಗಿತ್ತು. ಶ್ರೀಮಂತ ಮನೆಯ ಹುಡುಗ ತೇಜಸ್ವಿ, ಅವನ ಅತ್ತೆ ಮಗಳು ಮಧ್ಯಮ ವರ್ಗದ ಶ್ರಾವಣಿ, ಇವರನ್ನು ಒಂದಾಗಲು ಬಿಡದ ಮಾಯಾ. ಇದರ ಆಧಾರದ ಮೇಲೆ ಕಥೆ ಸಾಗಿತ್ತು.
ಈ ಧಾರಾವಾಹಿಯಲ್ಲಿ ಆರ್‌ಕೆ ಚಂದನ್, ದಿವ್ಯಾ ವಾಗುಕರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ರಘುಚರಣ್ ತಿಪಟೂರು ಇದಕ್ಕೆ ನಿರ್ದೇಶನ ಮಾಡಿದ್ದರು. ಈ ಧಾರಾವಾಹಿ ಅತ್ತೆ-ಸೊಸೆ ಜಗಳಕ್ಕಿಂತ ತುಂಬ ವಿಭಿನ್ನವಾಗಿ ಮೂಡಿಬಂದಿದ್ದರಿಂದ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ತೇಜಸ್ವಿ, ಶ್ರಾವಣಿ ಪಾತ್ರಕ್ಕೆ ಸಂಬಂಧಪಟ್ಟಂತೆ ನೂರಾರು ಫ್ಯಾನ್ಸ್ ಪೇಜ್‌ಗಳು ಸೃಷ್ಟಿಯಾಗಿದ್ದವು.
ಮಾಂಗಲ್ಯಂ ತಂತುನಾನೇನ’ ಧಾರಾವಾಹಿಯಲ್ಲಿ ‘ನಾಗರಹಾವು’ ಸಿನಿಮಾದ ದೃಶ್ಯಗಳನ್ನು ಮತ್ತೆ ರೀ-ಕ್ರಿಯೇಟ್ ಮಾಡಲಾಗಿತ್ತು. ಈಗಾಗಲೇ ಸಾಕಷ್ಟು ಹಿಟ್ ಧಾರಾವಾಹಿಗಳನ್ನು ನೀಡಿರುವ ನಿರ್ದೇಶಕ ರಘುಚರಣ್ ಅವರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪರಮ ಭಕ್ತ. ಹೀಗಾಗಿ ಪುಟ್ಟಣ್ಣ ಕಣಗಾಲ್ ಅವರ ಜನ್ಮದಿನದಂದು ಧಾರಾವಾಹಿಯಲ್ಲೂ ಕೂಡ ‘ನಾಗರಹಾವು’ ಚಿತ್ರದ ಸನ್ನಿವೇಶ ತರಬೇಕು ಎನ್ನೋದು ರಘೂಚರಣ್ ಅವರ ಇಂಗಿತವಾಗಿ. ಈ ರೂಪದಲ್ಲಿ ಪುಟ್ಟಣ್ಣನವರಿಗೆ ಚಿಕ್ಕ ಗುರುಕಾಣಿಕೆ ಸಲ್ಲಿಸಬೇಕೆಂದು ‘ನಾಗರಹಾವು’ ಸಿನಿಮಾದ ದೃಶ್ಯಗಳನ್ನು ಧಾರಾವಾಹಿಯಲ್ಲಿ ತರಲಾಗಿತ್ತು.
Comments are closed.