ಕರ್ನಾಟಕ

ರಾಜ್ಯದಲ್ಲಿ ಇದುವರಗೆ ಒಂದು ಲಕ್ಷ ಮಂದಿಗೆ ಕೊರೋನಾವೈರಸ್ ಪರೀಕ್ಷೆ!

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಇದುವರಗೆ ಒಂದು ಲಕ್ಷ ಮಂದಿಗೆ ಕೊರೋನಾವೈರಸ್ ಪರೀಕ್ಷೆ ನಡೆಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಸಚಿವ ಸುಧಾಕರ್ “ಕರ್ನಾಟಕ 1 ಲಕ್ಷ ಕೊರೋನಾ ಪರೀಕ್ಷೆಗಳ ಮೈಲಿಗಲ್ಲು ದಾಟಿದೆ. ಕರೋನಾ ವಿರುದ್ಧದ ನಮ್ಮ ಹೋರಾಟವು ಹೆಚ್ಚು ಉತ್ಸಾಹದಿಂದ ಮುಂದುವರಿಯುತ್ತದೆ. ಈ ತಿಂಗಳ ಅಂತ್ಯದ ವೇಳೆಗೆ 60 ಟೆಸ್ಟ್ ಲ್ಯಾಬ್‌ಗಳನ್ನು ಹೊಂದಲಿದ್ದು ಮ್ಮ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಲಲಿದ್ದೇವೆ. ಇಷ್ಟಲ್ಲದೆ ದಿನಕ್ಕೆ 10,000 ಪರೀಕ್ಷೆಗಳನ್ನು ನಡೆಸಲು ಇದರಿಂದ ಸಾಧ್ಯವಾಗಲಿದೆ” ಎಂದಿದ್ದಾರೆ.

ಈ ಮಧ್ಯೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಇಂದು 36 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 789ಕ್ಕೆ ತಲುಪಿದೆ.

Comments are closed.