ಕರ್ನಾಟಕ

ತಮಿಳುನಾಡಿನಿಂದ ಕರ್ನಾಟಕಕ್ಕೆ ಬಂದ ಮದ್ಯ ಪ್ರಿಯರು!

Pinterest LinkedIn Tumblr


ಬೆಂಗಳೂರು:ರಾಜ್ಯಾದ್ಯಂತ ಮದ್ಯದಂಗಡಿಗಳು ಓಪನ್ ಆಗಿದ್ದು,ಮದ್ಯ ಖರೀದಿಗೆ ಜನರು ಮುಗಿ ಬೀಳುತ್ತಿದ್ದಾರೆ. ಬೆಳಗ್ಗೆಯಿಂದಲೂ ಕಿಲೋ ಮೀಟರ್ ದೂರದವರೆಗೂ ಕ್ಯೂನಲ್ಲಿ ನಿಂತಿರುವ ಜನರು ಮದ್ಯ ಖರೀದಿಸಿ ಸಂಭ್ರಮಪಡುತ್ತಿದ್ದಾರೆ.

ಈ ಮಧ್ಯೆ ಎಣ್ಣೆಗಾಗಿ ತಮಿಳುನಾಡಿನಿಂದಲೂ ಮದ್ಯ ಪ್ರಿಯರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಅತ್ತಿಬೆಲೆಯಲ್ಲಿ ವೈನ್ ಶಾಪ್ ಬಳಿ ಮದ್ಯ ಖರೀದಿಗೆ ಕ್ಯೂನಲ್ಲಿ ನಿಂತಿದ್ದ ತಮಿಳುನಾಡಿನ ಕುಡುಕರ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದಾರೆ.

ಅಂತರ ರಾಜ್ಯಗಳ ನಡುವೆ ಗಡಿ ಬಂದ್ ಆಗಿದ್ದರೂ ತಮಿಳುನಾಡಿನಿಂದ ಮದ್ಯ ಪ್ರಿಯರು ಹೇಗೆ ಕರ್ನಾಟಕಕ್ಕೆ ಬಂದರು, ಅವರನ್ನು ರಾಜ್ಯದೊಳಗೆ ಹೇಗೆ ಬಿಡಲಾಯಿತು ಎಂಬುದು ಇದೀಗ ಯಕ್ಷಪ್ರಶ್ನೆಯಾಗಿದೆ.

ತಮಿಳುನಾಡಿನಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಈ ಮಧ್ಯೆ ತಮಿಳುನಾಡಿನಿಂದ ಎಣ್ಣೆಗಾಗಿ ಕುಡುಕರ ತಂಡ ಕರ್ನಾಟಕ್ಕೆ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Comments are closed.