ಕರಾವಳಿ

ಕಾರವಾರದಲ್ಲಿ ಊಟಕ್ಕೂ ಗತಿಯಿಲ್ಲದೇ ಪರದಾಡುತ್ತಿರುವ ಹೊರ ರಾಜ್ಯದ ಕಟ್ಟಡ ಕಾರ್ಮಿಕರು

Pinterest LinkedIn Tumblr


ಕಾರವಾರ(ಮೇ.03): ತುತ್ತಿನ‌ ಚೀಲ ತುಂಬಿಸಿಕೊಳ್ಳಲು ರಾಜ್ಯ ಬಿಟ್ಟು ರಾಜ್ಯಕ್ಕೆ ಬಂದು‌ ಮೈ‌ಬಗ್ಗಿಸಿ ದುಡಿದ ಆ ಕಾರ್ಮೀಕರು ಈಗ ಲಾಕ್ ಡೌನ್ ಭೂತದಿಂದ ಕಂಗೆಟ್ಟು ಹೋಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಯೋಜನೆಯ ಕಾಮಗಾರಿ ಕಾರ್ಮಿಕರು ಸಂಬಳ ಇಲ್ಲದೆ ಅಡ್ಡಕತ್ತರಿಯಲ್ಲಿ ಇದ್ದಾರೆ.

ಹೌದು, ಇವರೆಲ್ಲ ಸುಮ್ಮನೆ ಒಟ್ಟಾಗಿ ಜಮಾಯಿಸಿಲ್ಲ, ಬದಲಾಗಿ ತಾವು ದುಡಿದ ಹಣವನ್ನ ನ್ಯಾಯಯುತವಾಗಿ‌ ಕೇಳುತ್ತಿದ್ದಾರೆ. ಅಷ್ಟಕ್ಕೂ ಇವರಿಗೆ ಬರಬೇಕಾಗಿದ್ದು ಬರೋಬ್ಬರಿ ಮೂರು ತಿಂಗಳ ಸಂಬಳ ಮಾತ್ರ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಹಾದು ಹೋದ ರಾಷ್ಟ್ರೀಯ ಹೆದ್ದಾರಿ 66ರ ಅಗಲಿಕರಣ ಚತುಷ್ಪತ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ಕರಾವಳಿಯುದ್ದಕ್ಕೂ ಸುಮಾರು 600 ಹೊರಾರಾಜ್ಯದ ಕಾರ್ಮಿಕರು ದುಡಿಯುತ್ತಿದ್ದಾರೆ. ಇವರಿಗೆ ಕಳೆದ ಮೂರು ತಿಂಗಳಿಂದ ಗುತ್ತಿಗೆ ಪಡೆದ ಐ.ಆರ್.ಬಿ ಕಂಪನಿ ಸಂಬಳ ನೀಡುತ್ತಿಲ್ಲ ಎನ್ನೋದು ಆರೋಪವಾಗಿದೆ. ಲಾಕ್​​​ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಕಾಲಿ‌ ಇದ್ದ ಕಾರ್ಮಿಕರಿಗೆ ಸಂಬಳ‌ ನೀಡದೆ ಇರೋದು ಜೀವನ‌ ನಿರ್ವಹಣೆ ಭಯಂಕರ ಕಷ್ಟಕರವಾಗಿದೆ.

ಇನ್ನು, ಇವರು ಬಿಹಾರ್, ಜಾರ್ಖಂಡ್, ಉತ್ತರ ಪ್ರದೇಶ ರಾಜ್ಯದ ಕಾರ್ಮಿಕರು. ಇಲ್ಲಿ ಬಂದು ಮೂರು ವರ್ಷ ಕಳೆದಿದೆ. ರಸ್ತೆ ಬದಿಯಲ್ಲೆ ಜೋಪಡಿ ಕಟ್ಟಿಕೊಂಡು ಅಲ್ಲೆ ಜೀವನ‌ ನಡೆಸುವುದು ಕಷ್ಟಕರ. ತಾವು ದುಡಿದ ಹಣದಲ್ಲಿ ತಮ್ಮ‌ ಕುಟುಂಬಕ್ಕೂ ನೀಡಿ ಇಲ್ಲಿಯೂ ಕೂಡಾ ತಮ್ಮ ಜೀವನ‌ ನಿರ್ವಹಣೆ ಮಾಡೋದು ತೀರಾ ಕಷ್ಟ. ಈ ಮಧ್ಯೆ ಲಾಕ್​​​ಡೌನ್ ಕಾರ್ಮಿಕರ‌ ಬದುಕನ್ನೆ ಕಸಿದುಕೊಂಡಿದೆ. ಇಂತ ಕ್ಲಿಷ್ಟಕರ ಸಮಯದಲ್ಲಿ ದುಡಿಸಿಕೊಳ್ಳುವ ಕಂಪನಿ ಸಂಬಳ ನೀಡದೆ ಸತಾಯಿಸುತ್ತಿರುವುದು ಸಮಸ್ಯೆ ಇನ್ನಷ್ಟು ಜಟಿಲವಾಗಿದೆ.

ಒಟ್ಟಾರೆ ಲಾಕ್​​ಡೌನ್​​ನಿಂದ‌ ಈಗ ತಾನೆ ಹೊರ ಬಂದು ಕೆಲಸದಲ್ಲಿ ತೊಡಗಿಕೊಂಡ ಕಾರ್ಮಿಕರಿಗೆ ಈಗ ಕಂಪನಿ ಸಂಬಳ ಕೊಡದೆ ಸತಾಯಿಸೋದು ಕಾರ್ಮಿಕರ ಬದುಕಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Comments are closed.