
ಹೊಸದಿಲ್ಲಿ: ಭಾರತದ ಕೊರೊನಾ ವೈರಸ್ ಮರಣ ಪ್ರಮಾಣ ವಿಶ್ವದಲ್ಲಿಯೇ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. ದೇಶದ ಕೊರೊನಾ ಸೋಂಕಿತರಲ್ಲಿ ಕೇವಲ ಶೇ.3.2ರಷ್ಟು ಜನ ಮಾತ್ರ ಮೃತಪಟಿದ್ದಾರೆ. 10,000ಕ್ಕೂ ಹೆಚ್ಚು ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿಸಿದರು.
ಇದುವರೆಗೂ ದೇಶದಲ್ಲಿ 10,000ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಲ್ಲಿರುವವರೂ ಸಹ ಚೇತರಿಸಿಕೊಳ್ಳುತ್ತಿದ್ದಾರೆ. ಇದರ ಜೊತೆ ಕಳೆದ 14 ದಿನಗಳಲ್ಲಿ ಕೊರೊನಾ ಸೋಂಕಿತರ ದ್ವಿಗುಣ ಪ್ರಮಾಣ 10.5 ದಿನಗಳಿಗೆ ಏರಿತ್ತು. ಈಗ ಅದು 12 ದಿನಗಳಿಗೆ ಏರಿದೆ ಎಂದು ವಿವರಿಸಿದರು.
ಭಾರತದ ಕೊರೊನಾ ವೈರಸ್ ಮರಣ ಪ್ರಮಾಣ ಶೇ.3.2ರಷ್ಟು ಇದೆ ಎಂದರು. ಇನ್ನು, ಕಳೆದ 24 ಗಂಟೆಗಳಲ್ಲಿ 2,644 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, 83 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಇದುವರೆಗೂ ದೇಶದಲ್ಲಿ 39,980 ಕೊರೊನಾ ಸೋಂಕಿತರು ಕಂಡುಬಂದಿದ್ದರೆ, 1,301 ಸಾವುಗಳು ಸಂಭವಿಸಿವೆ.
ಯಾವ ದೇಶದಲ್ಲಿ ಮರಣ ಪ್ರಮಾಣ ಎಷ್ಟು..?
ಬೆಲ್ಜಿಯಂ – ಶೇ.15.7
ಇಂಗ್ಲೆಂಡ್ – ಶೇ.15.4
ಫ್ರಾನ್ಸ್ – ಶೇ.14.7
ಇಟಲಿ – ಶೇ.13.6
ಸ್ಪೇನ್ – ಶೇ.11.5
ಮೆಕ್ಸಿಕೋ – 9.5
ಕೆನಡಾ – ಶೇ.6.3
ಅಮೆರಿಕ – ಶೇ.5.9
ಚೀನಾ – ಶೇ.5.5
ಭಾರತ – ಶೇ.3.2
Comments are closed.