ಮಂಗಳೂರು; ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ವತಿಯಿಂದ ನಗರದ ಹಿರಿಯ ಹಾಗೂ ಕಿರಿಯ ಆರೋಗ್ಯ ಸಹಾಯಕಿಯರು ಹಾಗೂ ಕಿರಿಯ ಆರೋಗ್ಯ ಸಹಾಯಕರಿಗೆ ಶಾಲು ಹೊದೆಸಿ, ಆಹಾರದ ಕಿಟ್, ಮುಖಕ್ಕೆ ಧರಿಸುವ ಮಾಸ್ಕ್ ನೀಡುವ ಮೂಲಕ ಶಾಸಕ ವೇದವ್ಯಾಸ್ ಕಾಮತ್ ಅವರು ಇತ್ತೀಚಿಗೆ ಗೌರವ ಅರ್ಪಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ಇಡೀ ದೇಶದಲ್ಲಿ ಕೋವಿಡ್ 19 ಮಹಾಮಾರಿಯ ವಿರುದ್ಧ ಹೋರಾಡುವ ಪ್ರತಿಯೊಬ್ಬರನ್ನೂ ಕೂಡ ಬಿಜೆಪಿ ಗೌರವಾದರಗಳಿಂದ ಅಭಿನಂದಿಸುತ್ತದೆ. ಆ ಪ್ರಯುಕ್ತ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಇಂದು ಗೌರವ ಅರ್ಪಿಸಲಾಯಿತು ಎಂದರು.
ಜನರ ಆರೋಗ್ಯದ ದೃಷ್ಠಿಯಿಂದ ಇಡೀ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಮನೆ ಮನೆಗೂ ತೆರಳಿ ಮಾಹಿತಿ ಸಂಗ್ರಹಿಸುವ ಕಾರ್ಯಗಳು ಆರೋಗ್ಯ ಸಹಾಯಕಿ – ಸಹಾಯಕರು ನಿಸ್ವಾರ್ಥದಿಂದ ಮಾಡುತ್ತಿದ್ದಾರೆ.
ಗಡಿಯಲ್ಲಿ ಯೋಧರು ಹೇಗೆ ಕಾರ್ಯ ನಿರತರಾಗಿದ್ದಾರೋ ಅದೇ ರೀತಿಯಾಗಿ ಸೋಂಕು ತಗಲುವ ಭೀತಿಯ ನಡುವೆಯೂ ತಮ್ಮ ಕರ್ತವ್ಯವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುವ ನಿಮಗೆಲ್ಲರೂ ಗೌರವ ಅರ್ಪಿಸುವುದು ನಮ್ಮ ಕರ್ತವ್ಯ ಎಂದರು.
ಇಂದು ಎಲ್ಲೆಡೆ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ವೇಳೆ ಆರೋಗ್ಯ ಸಹಾಯಕಿ – ಸಹಾಯಕರು ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯ ದೃಷ್ಠಿಯಿಂದ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ನಿಮ್ಮ ಈ ಸೇವಾ ಕಾರ್ಯಗಳು ಇನ್ನಿತರರಿಗೂ ಸ್ಪೂರ್ತಿಯಾಗಬೇಕು ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಪ್ರತಿ ನಿತ್ಯ ಆಶಾ ಕಾರ್ಯಕರ್ತರ ಜೊತೆಗೆ ಕಿರಿಯ ಆರೋಗ್ಯ ಸಹಾಯಕ – ಸಹಾಯಕಿಯರು ಮನೆ ಮನೆಗೆ ತೆರಳುವ ಅಷ್ಟಾಗಿ ಪ್ರಚಾರ ಸಿಗುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಪ್ರಥಮವಾಗಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ಬಿಜೆಪಿ ವತಿಯಿಂದ ಇವರಿಗೆ ಗೌರವ ಅರ್ಪಿಸಲಾಯಿತು ಎಂದು ಶಾಸಕರು ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ದಿವಾಕರ್ ಪಾಂಡೇಶ್ವರ,ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ರೂಪಾ ಡಿ. ಬಂಗೇರ, ಜೆ ಸುರೇಂದ್ರ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ರಮೇಶ್ ಕಂಡೆಟ್ಟು, ಭಾಸ್ಕರ್ ಚಂದ್ರ ಶೆಟ್ಟಿ ಪಾಲಿಕೆ ಸದಸ್ಯರಾದ ಜಗದೀಶ್ ಶೆಟ್ಟಿ ಬೋಳೂರು ಹಾಗೂ ಜಿಲ್ಲಾ ಶುಶ್ರೂಷಣಾಧಿಕಾರಿ ಶ್ರೀಮತಿ ಲಿಸ್ಸಿ ಉಪಸ್ಥಿತರಿದ್ದರು




Comments are closed.