ಮಂಗಳೂರು, ಎಪ್ರಿಲ್. 28 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೋಮವಾರ ಮತ್ತೆ ಇಬ್ಬರಲ್ಲಿ ಕೋವಿಡ್ – 19 (ಕೊರೋನ) ಸೋಂಕು ದೃಢವಾದ ಹಿನ್ನಲೆಯಲ್ಲಿ ಇವರಿರುವ ಶಕ್ತಿನಗರದ ಕಕ್ಕೆ ಬೆಟ್ಟು ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಲಶೇಖರ ಸಮೀಪದ ಶಕ್ತಿನಗರದ ನಿವಾಸಿಗಳಿಬ್ಬರಲ್ಲಿ ಕೋವಿಡ್ – 19 (ಕೊರೋನ) ಸೋಂಕುದೃಢಪಟ್ಟಿದೆ. ನಗರದ ಪಡೀಲ್ ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 80 ವರ್ಷದ ಮಹಿಳೆ ಹಾಗೂ ಆಕೆಯ 45 ವರ್ಷದ ಪುತ್ರನಲ್ಲಿ ಸೋಂಕು ಸೋಂಕುದೃಢಪಟ್ಟಿರುವುದಾಗಿ ಸೋಮವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಿಸಿದೆ.
ನಗರದ ಪಡೀಲ್ ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿರುವ ಶಕ್ತಿನಗರದ 80 ವರ್ಷದ ಮಹಿಳೆ ಹಾಗೂ ಅವರ 45 ವರ್ಷದ ಮಗನ ಗಂಟಲು ದ್ರವ ಪರೀಕ್ಷೆಯ ವರದಿಗಳು ಸೋಮವಾರ ಸ್ವೀಕೃತವಾಗಿದ್ದು, ವರದಿ ಕೊರೋನ ಸೋಂಕು ಇರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಕುಲಶೇಖರ ಸಮೀಪದ ಶಕ್ತಿನಗರದ ಕಕ್ಕೆ ಬೆಟ್ಟು ಪ್ರದೇಶದಲ್ಲಿರುವ ಅವರ ಮನೆಯ ಸುತ್ತ ಮುತ್ತ ಸೀಲ್ ಡೌನ್ ಮಾಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸೋಂಕಿತರು ವಾಸವಾಗಿದ್ದ ಮನೆಯಿಂದ ಸುಮಾರು 200 ಮೀ ವ್ಯಾಪ್ತಿಯನ್ನು ನಿಯಂತ್ರಿತ ವಲಯವಾಗಿ ಘೋಷಿಸಲಾಗಿದ್ದು, ಸುಮಾರು 22ಕ್ಕೂ ಅಧಿಕ ಮನೆಗಳ 120ಕ್ಕೂ ಅಧಿಕ ಮಂದಿಗೆ ಕ್ವಾರಂಟೈನ್ ಇರುತ್ತದೆ. ಸೀಲ್ ಡೌನ್ ವ್ಯಾಪ್ತಿಯಲ್ಲಿ 5 ಅಂಗಡಿ ಮುಂಗಟ್ಟುಗಳಿವೆ್.
ಕಕ್ಕೆಬೆಟ್ಟುವಿನ ಸುತ್ತಮುತ್ತಲಿನ 5 ಕೀ.ಮೀ ನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ 4800 ಮನೆ, 1300ಅಂಗಡಿ ಮುಂಗಟ್ಟು, 73,000 ಜನಸಂಖ್ಯೆ ಈ ವ್ಯಾಪ್ತಿಗೆ ಒಳಪಟ್ಟಿದ್ದಾರೆ.
ಬಫರ್ ಝೋನ್ ವ್ಯಾಪ್ತಿಗೆ ಪೂರ್ವಕ್ಕೆ ವಾಮಂಜೂರು ಜಂಕ್ಷನ್, ಪಶ್ಚಿಮಕ್ಕೆ ಮಾರ್ಕೇಟ್, ಉತ್ತರಕ್ಕೆ ಪದವಿನಂಗಡಿ, ದಕ್ಷಿಣಕ್ಕೆ ಬಂಟ್ಸ್ ಹಾಸ್ಟಲ್ ಜಂಕ್ಷನ್ ಒಳಪಡುತ್ತದೆ.


Comments are closed.