ಕರಾವಳಿ

ಹಂಗಾರಕಟ್ಟೆಯ ಚಕ್ರವರ್ತಿ ಬಾರ್ ಮೇಲ್ಮಾಡಿನ ಹೆಂಚು ಕಿತ್ತು 1.50ಲಕ್ಷದ ಮದ್ಯ‌ ಕಳವು!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆಯ ಚಕ್ರವರ್ತಿ ಬಾರ್ ಗೆ ಕಳ್ಳರು ನುಗ್ಗಿ ಸುಮಾರು 1.50 ಲಕ್ಷ ಮೌಲ್ಯದ ಮದ್ಯವನ್ನು ಕಳವುಗೈದ ಘಟನೆ ಎ.22ರಂದು ಸಂಭವಿಸಿದೆ. ಬಾರ್ ಹಿಂಬದಿಯ ಕಿಟಕಿ ಹಾಗೂ ಬಾರ್ ಹಂಚಿನ ಮಾಡಿನ ಹಂಚು ತೆಗೆದು ಒಳನುಗ್ಗಿ 266.735 ಲೀಟರ್ ನಷ್ಟು ಮದ್ಯ ತುಂಬಿರುವ ಸುಮಾರು 31 ಬಾಕ್ಸ್ ಹಾಗೂ 44.250 ಲೀಟರ್ ಬಿಯರ್ ಇರುವ 3 ಬಾಕ್ಸ್ ಕಳುವಾಗಿದ್ದು ಅದರ ಮೌಲ್ಯ 1,50,000 ರೂ.  ರೂಪಾಯಿ ಆಗಿದೆ.

ಗುರುವಾರ ಅಪರಾಹ್ನ ಬಾರ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಭೋಜ ದೇವಾಡಿಗರವರ ಕರೆ ಮಾಡಿ ಬಾರ್ ನ ಹಿಂಬದಿಯ ಕಿಟಕಿ ಮುರಿದಿದ್ದು ಮೇಲಿನ ಹಂಚು ತೆಗೆದ ಸ್ಥಿತಿಯಲ್ಲಿ ಇರುವುದಾಗಿ ತಿಳಿಸಿದ ಮೇರೆಗೆ ಬಾರ್ ನ ಮಾಲೀಕರು ಸ್ಥಳಕ್ಕಾಗಮಿಸಿ‌ ಕೋಟ ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು ಅವರು ಸ್ಥಳಕ್ಕಾಗಮಿಸಿ‌ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾರ್ ನ ಕಟ್ಟಡ ಅತ್ಯಂತ ಹಳೆಯದಾಗಿದ್ದು ಹಂಚಿನ ಮೇಲ್ಚಾವಣಿ ಹೊಂದಿದ್ದರಿಂದ ಕಳವು ಮಾಡಲು ಸುಲಭವಾಗಿದೆ ಹಾಗೂ ಕಟ್ಟಡದ ಎದುರುಗಡೆ ಸಿಸಿ ಟಿವಿ ಅಳವಡಿಸಿದ್ದರೂ ಹಿಂಬದಿಯಿಂದ ಕ್ಯಾಮಾರ ಕಣ್ತಪ್ಪಿಸಿ ಕೃತ್ಯವೆಸಗಲಾಗಿದೆ.

Comments are closed.