ರಾಷ್ಟ್ರೀಯ

Quiet Mode ವೈಶಿಷ್ಟ್ಯ ಬಿಡುಗಡೆ ಮಾಡಿದ Facebook

Pinterest LinkedIn Tumblr


ನವದೆಹಲಿ: ಸಾಮಾಜಿಕ ಮಾಧ್ಯಮದ ದಿಗ್ಗಜ ಕಂಪನಿಯಾಗಿರುವ Facebook ತನ್ನ ಗ್ರಾಹಕರಿಗೆ ನೂತನವಾಗಿ Quiet Mode ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವನ್ನು ಬಳಸಿ ಬಳಕೆದಾರರು ವಿಶ್ವದ ಅತಿ ದೊಡ್ಡ ಸಾಮಾಜಿಕ ಮಾಧ್ಯಮ ತಾಣದಲ್ಲಿ ತಮ್ಮ ಟೈಮ್ ಅನ್ನು ನಿರ್ವಹಿಸಬಹುದಾಗಿದೆ. ಈ ವೈಶಿಷ್ಟ್ಯದ ಮೂಲಕ ನೀವು ಏಕಕಾಲಕ್ಕೆ ಎಲ್ಲ ನೋಟಿಫಿಕೇಶನ್ ಗಳನ್ನು ಮ್ಯೂಟ್ ಮಾಡಬಹುದು. ಆದರೆ, ಸದ್ಯ ಈ ವೈಶಿಷ್ಟ್ಯವನ್ನು ಕೇವಲ iOS ಬಳಕೆದಾರರಿಗೆ ಮಾತ್ರ ಅಪ್ಡೇಟ್ ಮಾಡಲಾಗಿದೆ. ಮೇ 2020ರಿಂದ ಈ ವೈಶಿಷ್ಟ್ಯ ಅಂಡ್ರಾಯಿಡ್ ಬಳಕೆದಾರರಿಗೂ ಕೂಡ ರೋಲ್ ಔಟ್ ಮಾಡಲು ಉದ್ದೇಶಿಸಲಾಗಿದೆ.

Quiet Mode ವೈಶಿಷ್ಟ್ಯವನ್ನು ಎನೇಬಲ್ ಮಾಡುವ ಮೂಲಕ ಫೇಸ್ ಬುಕ್ ಬಳಕೆದಾರರು ಫೇಸ್ ಬುಕ್ ಮೇಲೆ ಬರುವ ನೋಟಿಫಿಕೇಶನ್ ಗಳನ್ನು ಮ್ಯೂಟ್ ಮಾಡಬಹುದಾಗಿದೆ. ಆದರೆ, ಪ್ರೈವೆಸಿ ಅಪ್ಡೇಟ್ ನೋಟಿಫಿಕೇಶನ್ ಹಾಗೂ ಇತರೆ ಅತ್ಯಾವಶ್ಯಕ ಅಲರ್ಟ್ ಗಳನ್ನು ಇದು ಮ್ಯೂಟ್ ಮಾಡುವುದಿಲ್ಲ. ಫೇಸ್ ಬುಕ್ ಪ್ರಕಾರ ಬಳಕೆದಾರರು ತನ್ನ ಅವಶ್ಯಕತೆಗೆ ತಕ್ಕಂತೆ Quiet Mode ಅನ್ನು ಎನೇಬಲ್ ಅಥವಾ ಡಿಸೇಬಲ್ ಮಾಡಬಹುದಾಗಿದೆ. ಇದನ್ನು ನೀವು ಶೆಡ್ಯೂಲ್ ಕೂಡ ಮಾಡಬಹುದು.

Quiet Mode ನಲ್ಲಿ ಬಳಕೆದಾರರು ಮೊದಲು ಒಂದು ಶೆಡ್ಯೂಲ್ ಸೆಟ್ ಮಾಡಬೇಕು. ಈ ಮೋಡ್ ಒಂದು ಬಾರಿ ಸಕ್ರೀಯವಾದರೆ ಫೇಸ್ ಬುಕ್ ಆಪ್ ಮೇಲೆ ಬರುವ ಹೊಸ ಸಂದೇಶಗಳಿಂದ ಹಿಡಿದು ಇತರೆ ಯಾವುದೇ ನೋಟಿಫಿಕೇಶನ್ ಗಳು ಮ್ಯೂಟ್ ಆಗಲಿವೆ. ಬಳಕೆದಾರ ಎಷ್ಟು ಸಮಯದವರೆಗೆ ಫೇಸ್ ಬುಕ್ ಬಳಕೆ ಮಾಡಿದ್ದಾನೆ ಮತ್ತು ಏನು ಮಾಡಿದ್ದಾನೆ ಎಂಬುದನ್ನೂ ಕೂಡ ಈ ವೈಶಿಷ್ಟ್ಯದ ಮೂಲಕ ತಿಳಿಯಬಹುದಾಗಿದೆ. ಆದರೆ, ಕ್ವಾಯಿಟ್ ಮೋಡ್ ಅವಧಿಯಲ್ಲಿ ನೀವು ಫೇಸ್ ಬುಕ್ ಅನ್ನು ಹೆಚ್ಚಿಗೆ ಬಳಸಲು ಸಾಧ್ಯವಿಲ್ಲ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
ಮೊದಲು ನಿಮ್ಮ ಫೇಸ್ ಬುಕ್ ಖಾತೆಗೆ ಲಾಗಿನ್ ಆಗಿ. ಬಳಿಕ ಮುಖ್ಯ ಮೇನ್ಯೂಗೆ ಭೇಟಿ ನೀಡಿ Settings and Privacy ಮೇಲೆ ಮತ್ತು ನಂತರ Your Time on Facebook ಮೇಲೆ ಟ್ಯಾಪ್ ಮಾಡಿ. ಆ ಬಳಿಕ Manage your Time ಮೇಲೆ ಕ್ಲಿಕ್ಕಿಸಿ. ಈಗ ನಿಮಗೆ ಇದರಲ್ಲಿ ಎರಡು ಆಪ್ಶನ್ ಗಳು ಕಾಣಿಸಿಕೊಳ್ಳಲಿವೆ. ಇದರಲ್ಲಿ ಮೊದಲ ಆಪ್ಶನ್ Quiet Mode ಇರಲಿದ್ದು, ಎರಡನೇ ಆಯ್ಕೆ Scheduled Quiet Mode ಇರಲಿದೆ. Quiet Mode ಬಳಸಿ ಸಂಪೂರ್ಣ ಆಪ್ ಮೇಲೆ ನೋಟಿಫಿಕೇಶನ್ ಬ್ಲಾಕ್ ಸಕ್ರೀಯಗೊಳಿಸಬಹುದು. ಎರಡನೇ ಆಯ್ಕೆಯಲ್ಲಿ ನೀವು ಕೇವಲ ಕೆಲ ಸಮಯದವರೆಗೆ ಮಾತ್ರ ಸಂಪೂರ್ಣ ನೋಟಿಫಿಕೇಶನ್ ಗಳನ್ನು ಬ್ಲಾಕ್ ಮಾಡಬಹುದಾಗಿದೆ. ನೋಟಿಫಿಕೇಶನ್ ಮ್ಯೂಟ್ ಮಾಡುವ ವೇಳೆ 15 ನಿಮಿಷ ಫೇಸ್ ಬುಕ್ ಬಳಸುವ ಆಯ್ಕೆಯನ್ಜು ನೀವು ಆಯ್ದುಕೊಳ್ಳಬಹುದು.

Comments are closed.