ರಾಷ್ಟ್ರೀಯ

ಸರ್ಕಾರಿ-ಖಾಸಗಿ ವಲಯಗಳ ಕೆಲಸದ ಅವಧಿಯನ್ನು 8 ಗಂಟೆ ಬದಲು 12 ಗಂಟೆಗೆ ಹೆಚ್ಚಿಸುವ ಸಾಧ್ಯತೆ !

Pinterest LinkedIn Tumblr

ನವದೆಹಲಿ: ಕೇಂದ್ರ ಸರ್ಕಾರವು ಉದ್ಯೋಗಿಗಳ ಕೆಲಸದ ಅವಧಿಯನ್ನು ನಿತ್ಯದ 8 ಗಂಟೆ ಬದಲು 12 ಗಂಟೆಗೆ ಹೆಚ್ಚಿಸುವ ಸಾಧ್ಯತೆಗಳಿದ್ದು, ಈ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕೊರೋನಾವ ವೈರಸ್ ಲಾಕ್’ಡೌನ್ ಪರಿಣಾಮ ಇದೀಗ ಸರ್ಕಾರಿ ಹಾಗೂ ಖಾಸಗಿ ವಲಯಗಳ ಕಚೇರಿಗಳು, ಉದ್ದಮೆಗಳು, ಕೆಲಸ ನಿಲ್ಲಿಸಿದ್ದು, ಹೀಗಾಗಿ ಅನೇಕ ಕೆಲಸಗಳು ಹಾಗೆಯೇ ಬಾಕಿ ಉಳಿದಿವೆ.

ಹೀಗಾಗಿ ಈ ಬಾಕಿ ಕೆಲಸ ಸರಿದೂಗಿಸಿಕೊಳ್ಳಲು ಕೆಲಸದ ಅವಧಿ ಹೆಚ್ಚಿಸುವ ಇರಾದೆ ಸರ್ಕಾರಕ್ಕಿದೆ. ಆ ಕಾರಣಕ್ಕೇ ಕರ್ತವ್ಯದ ಅವಧಿಯನ್ನು ಇನ್ನೂ ನಾಲ್ಕು ತಾಸು ಹೆಚ್ಚಿಸುವ ಸುಗ್ರೀವಾಜ್ಞೆ ಹೊರಡಿಸಲು ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಕೆಲಸದ ಅವಧಿ ಹೆಚ್ಚಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡುವ ಅಂಶ ಸುಗ್ರೀವಾಜ್ಞೆಯಲ್ಲಿರಲಿದೆ ಎಂದು ವರದಿಗಳು ತಿಳಿಸಿವೆ. ಲಾಕ್’ಡೌನ್ ಮುಗಿದ ಬಳಿಕ ಕೆಲಸ ಆರಂಭವಾದರೂ, ಊರಿಗೆ ತೆರಳಿರುವ ಕೆಲಸಗಾರರು ತಕ್ಷಣಕ್ಕೇ ಕರ್ತವ್ಯಕ್ಕೆ ಮರಳುವ ಸಾಧ್ಯತೆಗಳಿಲ್ಲ. ಹೀಗಾಗಿ ಇದ್ದ ನೌಕರರಿಗೇ ಹೆಚ್ಚು ಕೆಲಸ ನೀಡಿ, ಕೊರತೆ ಸರಿದೂಗಿಸಲು ಅವಕಾಶ ನೀಡಬೇಕು ಎಂದು ಈ ಹಿಂದೆ ಉದ್ದಮೆ ರಂಗ ಸರ್ಕಾರಕ್ಕೆ ಕೋರಿತ್ತು.

Comments are closed.