ರಾಷ್ಟ್ರೀಯ

ಕೊರೋನಾ ಹಿನ್ನೆಲೆ; ಕೇಂದ್ರ ಸರ್ಕಾರ ಸೂಚಿಸಿರುವ ಮಾರ್ಗಸೂಚಿಯಲ್ಲಿ ಕೈಗಾರಿಕಾ ವಿನಾಯಿತಿ ಬಗ್ಗೆ ಏನೆಲ್ಲ ಇದೆ ನೋಡಿ….

Pinterest LinkedIn Tumblr

ನವದೆಹಲಿ: ಕೊರೋನಾ ವೈರಸ್ ಪ್ರಸರಣಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಾರ್ಗಸೂಚಿಯಲ್ಲಿ ಕೈಗಾರಿಕಾ ವಲಯಕ್ಕೆ ಒಂದಷ್ಟು ವಿನಾಯಿತಿ ನೀಡಲಾಗಿದೆ.

ಪ್ರಮುಖವಾಗಿ ಕೃಷಿ ಕೇಂದ್ರಿತ ಕೈಗಾರಿಕಾ ಉದ್ಯಮಗಳಿಗೆ ಕೇಂದ್ರ ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ಒಂದಷ್ಟು ವಿನಾಯಿತಿ ಘೋಷಣೆ ಮಾಡಿದ್ದು, ಎಲ್ಲ ರೀತಿಯ ಕೃಷಿ ಕೇಂದ್ರಿತ ಉದ್ಯಮಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ. ಅಗತ್ಯ ವಸ್ತುಗಳಿಂತೆಯೇ ಕೃಷಿ ಸಂಬಂಧಿತ ಯಂತ್ರೋಪಕರಣಗಳ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಅಂಗಡಿಗಳು ಲಾಕ್ ಡೌನ್ ನಿಂದ ವಿನಾಯಿತಿ ಪಡೆದಿವೆ. ಅಲ್ಲದೆ ಕೃಷಿ ಯಂತ್ರೋಪಕರಣಗಳ ಬಿಡಿಭಾಗಗಳ ತಯಾರಿಕಾ ಕಾರ್ಖಾನೆಗಳು ಮತ್ತು ಮಾರಾಟ ಮಾಡುವ ಅಂಗಡಿಗಳಿಗೆ, ರಿಪೇರಿ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ.

ವಿಶೇಷ ಕೈಗಾರಿಕಾ ಪ್ರದೇಶಗಳಲ್ಲಿರುವ (ಎಸ್ಇಜೆಡ್ ಮತ್ತು ಇಒಯು, ಕೈಗಾರಿಕಾ ಎಸ್ಟೇಟ್ ಗಳು ಮತ್ತು ಕೈಗಾರಿಕಾ ಟೌನ್ ಷಿಪ್ ಗಳು) ಕೈಗಾರಿಕೆಗಳು ಸರ್ಕಾರ ಸೂಚಿಸಿರುವ ನಿರ್ದೇಶನಗಳನ್ನು, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಕೆಲಸಗಳನ್ನು ಮುಂದುವರೆಸಬಹುದು. ಪ್ರಮುಖವಾಗಿ ಐಟಿ ಹಾರ್ಡ್ ವೇರ್ ಮತ್ತು ಅಗತ್ಯ ವಸ್ತುಗಳ ಪ್ಯಾಕೇಜಿಂಗ್ ಕೈಗಾರಿಕೆಗಳು ಕಾರ್ಯ ನಿರ್ವಹಣೆಗೆ ಸರ್ಕಾರ ಶರತ್ತುಬದ್ಧ ಅನುಮತಿ ನೀಡಿದೆ. ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳು, ವೈದ್ಯಕೀಯ ಸಾಧನಗಳ ಉತ್ಪಾದನಾ ಘಟಕಗಳು, ಅವುಗಳ ಕಚ್ಚಾ ವಸ್ತುಗಳ ಪೂರೈಕೆ ಘಟಕಗಳ ಕಾರ್ಯನಿರ್ವಹಣೆ.

ಏಪ್ರಿಲ್ 20ರ ನಂತರ ಮನ್ರೇಗಾ ಕಾರ್ಮಿಕರು ಕೇಂದ್ರ ಸರ್ಕಾರ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಪಾಲನೆ ಮಾಡಿಕೊಂಡು ಕೆಲಸ ಮಾಡಬಹುದು.

ಗಣಿಗಾರಿಕೆ, ಇಂಧನ ತಯಾರಿಕಾ ಸಂಸ್ಥೆಗಳ ಕಾರ್ಯ ನಿರ್ವಹಣೆಗೆ ಅನುವು. ಕಲ್ಲಿದ್ದಲು ಮತ್ತು ಖನಿಜ ಉತ್ಪಾದನೆ, ಸಾರಿಗೆ, ಔಷಧಿ ತಯಾರಿಕೆ, ಔಷಧಿ ತಯಾರಿಕೆಯ ಕಚ್ಛಾ ಸಾಮಾಗ್ರಿಗಳ ತಯಾರಿಕಾ ಸಂಸ್ಥೆಗಳ ಕಾರ್ಯ ನಿರ್ವಹಣೆ

ಕೈಗಾರಿಕಾ ವಲಯಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಆರ್ ಬಿಐ, ಸೆಬಿ ಅಡಿಯಲ್ಲಿ ಬರುವ ಸಂಸ್ಥೆಗಳು ಮತ್ತು ವಿಮಾನ ಸಂಸ್ಥೆಗಳು ಕಾರ್ಯ ನಿರ್ವಹಣೆ ಮಾಡಲಿವೆ.

ಚಹಾ ತಯಾರಿಕಾ ಸಂಸ್ಥೆಗಳು, ಹಾಲಿನ ಉತ್ಪನ್ನ ತಯಾರಿಕಾ ಸಂಸ್ಥೆಗಳು, ಪೌಲ್ಟ್ರಿ, ಕಾಫಿ-ಟೀ, ರಬ್ಬರ್ ತಯಾರಿಕಾ ಕೈಗಾರಿಕಗಳಿಗೆ ಏಪ್ರಿಲ್ 20 ನಂತರ ಕಾರ್ಯ ನಿರ್ವಹಣೆಗೆ ಅನುಮತಿ.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳು, ಸ್ಥಳೀಯ ಸರ್ಕಾರಿ ಕಚೇರಿಗಳು ಮತ್ತು ಸಂಸ್ಥೆಗಳು ಕಾರ್ಯನಿರ್ವಹಿಸಲಿವೆ.

ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಬೀಜಗಳ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಘಟಕಗಳು, 5.ಚಹಾ ಉದ್ಯಮ, ಗರಿಷ್ಠ 50% ಕಾರ್ಮಿಕರನ್ನು ಹೊಂದಿರುವ ತೋಟಗಳು

ಮೀನುಗಾರಿಕೆ (ಸಾಗರ)/ಜಲಚರ ಸಾಕಣೆ ಉದ್ಯಮದ ಕಾರ್ಯಾಚರಣೆಗಳು, ಆಹಾರ ಮತ್ತು ನಿರ್ವಹಣೆ; ಮೊಟ್ಟೆಕೇಂದ್ರಗಳು, ಫೀಡ್ ಸಸ್ಯಗಳು, ವಾಣಿಜ್ಯ ಅಕ್ವೇರಿಯಾ, ಚಲನೆ, ಮೀನು / ಸೀಗಡಿ ಮತ್ತು ಮೀನು ಉತ್ಪನ್ನಗಳು, ಮೀನು ಬೀಜ / ಫೀಡ್ ಮತ್ತು ಈ ಎಲ್ಲದಕ್ಕೂ ಕಾರ್ಮಿಕರು ಚಟುವಟಿಕೆಗಳು

Comments are closed.