ಕರಾವಳಿ

ಕಾರವಾರ: ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಗೈರಾಗಿದ್ದ ವೈದ್ಯರಿಗೆ ನೋಟಿಸ್

Pinterest LinkedIn Tumblr


ಕಾರವಾರ(ಏ.13): ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಾಜರಾಗದೇ ಗೈರಾಗಿದ್ದ ತಾಲೂಕಿನ ಎರಡು ಪ್ರಾಥಮಿಕ ಕೇಂದ್ರಗಳ ಇಬ್ಬರು ವೈದ್ಯರಿಗೆ ಕಾರಣ ಕೇಳಿ ನೋಟಿಸ್ ನೀಡಿಲಾಗಿದೆ.

ತಾಲೂಕಿನ ಆರಗದಲ್ಲಿರುವ ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ಕರ್ತವ್ಯಕ್ಕೆ ಇಬ್ಬರು ವೈದ್ಯರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಿ ಎನ್​ ಅಶೋಕ್​​​ ಕುಮಾರ್ ನಿಯೋಜಿಸಿದ್ದರು. ಕೋವಿಡ್-19 ತರಬೇತಿ ಪಡೆದಿದ್ದ ವೈದ್ಯರು ಮೊಬೈಲ್​​ ಸ್ವಚ್ಚ ಆಪ್​​​ ಮಾಡಿಕೊಂಡು ಕರ್ತವ್ಯಕ್ಕೆ ಹಾಜರಾಗದೇ ನಾಪತ್ತೆಯಾಗಿದ್ದರು.

ಇಬ್ಬರು ಸರ್ಜನ್, ಆರು ಎಂಬಿಬಿಎಸ್ ವೈದ್ಯರು, 12 ಮಂದಿ ನರ್ಸ್, ಆರು ಮಂದಿ ಸಹಾಯಕರನ್ನು ನಿಯೋಜಿಸಲಾಗಿತ್ತು. ಆದೇಶ ಪಾಲನೆ ಮಾಡದ ಹಿನ್ನಲೆ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾ ಎಂ.ರೋಷನ್ ಅವರು ವೈದ್ಯರು ತುರ್ತು ಸಂದರ್ಭದಲ್ಲಿ ಕರ್ತವ್ಯಲೋಪ ಎಸಗಿದ್ದಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಇಂದು ಮತ್ತೆ 15 ಕೊರೋನಾ ವೈರಸ್​ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.ಒಟ್ಟು 247 ಸೋಂಕಿತರಲ್ಲಿ ಈಗಾಗಲೇ 59 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯಕ್ಕೆ 182 ಜನರು ಕೊರೋನಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments are closed.