ರಾಷ್ಟ್ರೀಯ

ಪೊಲೀಸ್ ಅಧಿಕಾರಿಯ ಕೈ ಕತ್ತರಿಸಿದ ದುಷ್ಕರ್ಮಿಗಳ ಬಂಧನ

Pinterest LinkedIn Tumblr


ಲಾಕ್‌ಡೌನ್‌ ಟೈಮಲ್ಲಿ ಫುಲ್‌ಟೈಮ್ ‘ರೈತ’ನಾದ ನಟ ಉಪೇಂದ್ರ!ಲಾಕ್‌ಡೌನ್‌ ಟೈಮಲ್ಲಿ ಫುಲ್‌ಟೈ…Video: ಹುಟ್ಟೂರಲ್ಲಿ ‘ಕುರಿ’ ಮೇಯಿಸ್ಕೊಂಡು ಆರಾಮಾಗಿದ್ದಾರೆ ‘ಪ್ರಥಮ್‌’Video: ಹುಟ್ಟೂರಲ್ಲಿ ‘ಕುರಿ’ …ಶಾರುಖ್‌ ಖಾನ್‌ ಮಾಡಿದ ಕೆಲಸಕ್ಕೆ ಧನ್ಯವಾದ ತಿಳಿಸಿದ ಉದ್ಧವ್ ಠಾಕ್ರೆ! ಕಿಂಗ್‌ ಖಾನ್‌ಗೆ ಎಲ್ಲರಿಂದ ಮೆಚ್ಚುಗೆಶಾರುಖ್‌ ಖಾನ್‌ ಮಾಡಿದ ಕೆಲಸಕ್…

ಪಟಿಯಾಲಾ: ಲಾಕ್‌ಡೌನ್ ಉಲ್ಲಂಘಿಸಿ ಅಲೆಯುತ್ತಿದ್ದ ಕಾರಣಕ್ಕೆ ತಮ್ಮನ್ನು ತಡೆದ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ದಾಳಿ ಮಾಡಿ ನಡೆಸಿ ಪರಾರಿಯಾಗಿದ್ದ ಎಲ್ಲಾ 9 ನಿಹಂಗ್ ಸಿಖ್ ಧರ್ಮೀಯರನ್ನು ಪಟಿಯಾಲಾ ಪೊಲೀಸರು ಬಂಧಿಸಿದ್ದಾರೆ.

ಪಾಸ್ ತೋರಿಸುವಂತೆ ಕೇಳಿದ ಪೊಲೀಸ್ ಅಧಿಕಾರಿಯ ಕೈ ಕತ್ತರಿಸಿ ಪರಾರಿಯಾಗಿದ್ದ ಎಲ್ಲಾ 9 ನಿಹಂಗ್‌ರು ಪಟಿಯಾಲಾದ ಕಿಚ್ರಿ ಸಾಹಿಬ್ ಗುರುದ್ವಾರದಲ್ಲಿ ಆಶ್ರಯ ಪಡೆದಿದ್ದರು. ಕೂಡಲೇ ಗುರುದ್ವಾರವನ್ನು ಸುತ್ತುವರೆದ ಪೊಲೀಸರು ಶರಣಾಗುವಂತೆ ಮಾಡಿದ ಮನವಿಗೆ ಸ್ಪಂದಿಸಿ ಎಲ್ಲಾ ನಿಹಂಗ್‌ರು ಬಂಧನಕ್ಕೊಳಪಟ್ಟಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪಟಿಯಾಲಾ ಪೊಲೀಸ್ ವರಿಷ್ಠಾಧಿಕಾರಿ ಮಂದೀಪ್ ಸಿಂಗ್, ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ ಎಲ್ಲಾ 9 ನಿಹಂಗ್‌ರನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇಷ್ಟೇ ಅಲ್ಲದೇ ಬಂಧಿತ ನಿಹಂಗ್‌ರಿಂದ ಮಾರಕಾಸ್ತ್ರಗಳು, ಬಂದೂಕು ಹಾಗೂ ಪೆಟ್ರೋಲ್ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಟಿಯಾಲಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇನ್ನು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಪಂಜಾಬ್ ಪೊಲೀಸರ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳ ಮೇಲೆ ಕಾರಿನಲ್ಲಿ ಬಂದ ನಾಲ್ಕೈದು ನಿಹಂಗ್‌ರು, ಮಾರಕಾಸ್ತ್ರಗಳಿಂದ ಭೀಕರವಾಗಿ ದಾಳಿ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ದಾಳಿಯಲ್ಲಿ ಎಎಸ್‌ಐ ಹರ್ಜಿತ್ ಸಿಂಗ್ ಅವರ ಕೈ ಕತ್ತರಿಸಿ ಹೋಗಿದ್ದು, ಇನ್ನುಳಿದ ಇಬ್ಬರು ಅಧಿಕಾರಿಗಳೂ ಗಂಭೀರವಾಗಿ ಗಾಯಗೊಂಡಿದ್ದರು. ಎಲ್ಲರನ್ನೂ ಸ್ಥಳೀಯ ರಾಜೀಂದ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Comments are closed.