
ವುಹಾನ್ನಲ್ಲಿರುವ ಪ್ರಾಣಿಗಳ ಮಾರುಕಟ್ಟೆಯಿಂದಲೇ ಕೋವಿಡ್ ವೈರಸ್ ಜಗತ್ತಿನಾದ್ಯಂತ ವ್ಯಾಪಿಸಿದೆ ಎಂಬ ವಾದಗಳ ನಡುವೆಯೇ, ಅಂಥ ಎಲ್ಲ ವೆಟ್ ಮಾರುಕಟ್ಟೆಗಳನ್ನೂ ಮುಚ್ಚುವಂತೆ ಚೀನಗೆ ಅಮೆರಿಕದ ಸಂಸದರ ಸಮೂಹವೊಂದು ಆಗ್ರಹಿಸಿದೆ. ವನ್ಯ ಪ್ರಾಣಿಗಳಿಂದಲೇ ವೈರಸ್ ಹಬ್ಬಿರುವ ಕಾರಣ, ಅದು ಮಾನವನ ಆರೋಗ್ಯಕ್ಕೆ ಅಪಾಯಕಾರಿಯಾಗುವ ಸಾಧ್ಯತೆ ಹೆಚ್ಚು ಎಂದೂ ಸಂಸದರು ಹೇಳಿದ್ದಾರೆ.
ಇಂಥ ಮಾರುಕಟ್ಟೆಗಳಲ್ಲಿ ಮೀನು, ಮಾಂಸಗಳನ್ನೇ ಮಾರಾಟಮಾಡುವ ಕಾರಣ, ಇಲ್ಲಿನ ನೆಲ ಪೂರ್ತಿ ತೇವದಿಂದ ಕೂಡಿರುತ್ತದೆ. ಹೀಗಾಗಿ, ಇಂಥ ಮಾರುಕಟ್ಟೆಗಳನ್ನು ವೆಟ್ ಮಾರ್ಕೆಟ್ ಎನ್ನುತ್ತಾರೆ. ಅಮೆರಿಕದಲ್ಲಿರುವ ಚೀನ ರಾಯಭಾರಿ ಕ್ಯೂ ಟಿಯಾಂಕಿ ಅವರಿಗೆ ಪತ್ರ ಬರೆದಿರುವ ಸೆನೆಟರ್ಗಳು, ತಕ್ಷಣವೇ ಇಂಥ ಮಾರುಕಟ್ಟೆಗಳನ್ನು ಚೀನ ಮುಚ್ಚಬೇಕು.
ಜಗತ್ತಿನಾದ್ಯಂತದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಈ ಹಿಂದೆಯೂ ವುಹಾನ್ ಮಾರುಕಟ್ಟೆಯೇ ಮೂಲವಾಗಿದೆ. ಪ್ರಾಣಿಗಳಿಂದ ಮನುಷ್ಯರಿಗೆ ಅನೇಕ ವೈರಸ್ಗಳ ವರ್ಗಾವಣೆಯಾಗಿವೆ. ಇದರಿಂದ ಇನ್ನಷ್ಟು ಸಮಸ್ಯೆಗಳು ಉದ್ಭವಿಸದಂತೆ ತಡೆದು, ಚೀನ ಹಾಗೂ ಅಂತಾರಾಷ್ಟ್ರೀಯ ಸಮುದಾಯಗಳನ್ನು ರಕ್ಷಿಸುವ ಸಲುವಾಗಿ ಅವುಗಳನ್ನು ಮುಚ್ಚುವ ನಿರ್ಧಾರ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
Comments are closed.