ಅಂತರಾಷ್ಟ್ರೀಯ

ಲಂಡನ್ ನಲ್ಲಿ ಕೊರೋನಾ ವೈರಸ್ ಗೆ ಭಾರತೀಯ ಮೂಲದ ಹೃದ್ರೋಗ ತಜ್ಞ ಡಾ.ಜಿತೇಂದ್ರ ಕುಮಾರ್ ಸಾವು

Pinterest LinkedIn Tumblr


ಲಂಡನ್: ಮಾರಣಾಂತಿಕ ಕೋವಿಡ್ 19 ವೈರಸ್ ಗೆ ಭಾರತೀಯ ಮೂಲದ ಹೃದ್ರೋಗ ತಜ್ಞ ಬ್ರಿಟನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ.

ಬ್ರಿಟನ್ ನ ಯೂನಿರ್ವಸಿಟಿ ಆಫ್ ವೇಲ್ಸ್(ಯುಎಚ್ ಡಬ್ಲ್ಯು)ನಲ್ಲಿ ಹೃದಯ ಶಸ್ತ್ರಚಿಕಿತ್ಸೆಯ ಅಸೋಸಿಯೇಟ್ ಸ್ಪೆಷಲಿಸ್ಟ್ ಜಿತೇಂದ್ರ ಕುಮಾರ್ ರಾಥೋಡ್ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ. ಸರ್ಜನ್ ರಾಥೋಡ್ ಅವರು ಹೃದ್ರೋಗಿಗಳ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ವರದಿ ತಿಳಿಸಿದೆ.

ಭಾರತದಲ್ಲಿ ವೈದ್ಯ ಪದವಿ ಪಡೆದಿರುವ 58 ವರ್ಷದ ಡಾ.ಜೀತು ಅವರ ಸಾವಿನಿಂದ ದೊಡ್ಡ ನಷ್ಟವುಂಟಾಗಿದೆ. ಅವರ ಸಾವು ತುಂಬಲಾರದ ನಷ್ಟವನ್ನು ಉಂಟುಮಾಡಿದೆ ಎಂದು ಕಾರ್ಡಿಫ್ ಆ್ಯಂಡ್ ವಾಲೆ ಯೂನಿರ್ವಸಿಟಿ ಆರೋಗ್ಯ ಮಂಡಳಿ ಸಂತಾಪವನ್ನು ಸೂಚಿಸಿದೆ.

1990ರಲ್ಲಿಯೇ ಜಿತೇಂದ್ರ ಅವರು ಕಾರ್ಡಿಯೋ ಸರ್ಜರಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹೃದ್ರೋಗಿಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದ ಡಾ.ಜೀತು ಅವರು ಎಲ್ಲರನ್ನೂ ತುಂಬಾ ಗೌರವದಿಂದ ನೋಡುತ್ತಿದ್ದರು. ಅವರೊಬ್ಬ ಮಾನವೀಯ ಅಂತಃಕರಣವುಳ್ಳ ವ್ಯಕ್ತಿತ್ವ ಹೊಂದಿರುವುದಾಗಿ ಮಂಡಳಿ ಅಭಿಪ್ರಾಯ ವ್ಯಕ್ತಪಡಿಸಿದೆ.

Comments are closed.