ಕರಾವಳಿ

ಎಂಅರ್‌ಜಿ ಗ್ರೂಪ್‌ನ‌ ಪ್ರಕಾಶ್ ಶೆಟ್ಟಿ ಅವರಿಂದ 1 ಕೋಟಿ. ರೂ. ವೆಚ್ಚದ ದಿನಸಿ ಕಿಟ್ ವಿತರಣೆ

Pinterest LinkedIn Tumblr

ಮಂಗಳೂರು : ಎಂಅರ್‌ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರ ಉದಾರ ದಾನವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೊನ ವೈರಸ್ನಿಂದ ತೊಂದರೆಯಾದ ಬಡ ಕುಟುಂಬಗಳಿಗೆ ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ದಿನ ಬಳಕೆ ವಸ್ತುಗಳ ವಿತರಿಸಲಾಯಿತು.

ಕರಾವಳಿ ಜಿಲ್ಲೆಯ ಎಲ್ಲಾ ಶಾಸಕರಿಗೆ 150 ಕಿಟ್ ಮತ್ತು ಎಲ್ಲಾ ಬಂಟರ ಸಂಘಗಳಿಗೆ ಕಿಟ್ ವಿತರಿಸಲಾಗುತ್ತಿದೆ, ಬಂಟವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಮೂಡಬಿದ್ರಿ, ಸುರತ್ಕಲ್,ಮೂಲ್ಕಿ ಮತ್ತು ಮಂಗಳೂರು ಭಾಗಗಳಿಗೆ ವಿತರಿಸಲಾಯಿತು.

ಕಿಟ್ ವ್ಯವಸ್ಥೆಯನ್ನು ಪ್ರಸಾದ್ ಕುಮಾರ್ ಶೆಟ್ಟಿ, ನಿತೇಶ್ ಶೆಟ್ಟಿ ಎಕ್ಕಾರು, ಈಶ್ವರ್ ಪ್ರಸಾದ್, ರಂಜಿತ್ ಶೆಟ್ಟಿ ಎಕ್ಕಾರು ನಿರ್ವಹಿಸಿದರು.

Comments are closed.