ಮಂಗಳೂರು, ಮಾರ್ಚ್.16; ವಿಶ್ವದಾದ್ಯಾಂತ ವ್ಯಾಪಿಸಿರುವ ಮಾರಕ ಕಾಯಿಲೆ ಕೊರೊನಾದ ಶಮನಕ್ಕಾಗಿ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ನೇತ್ರತ್ವದಲ್ಲಿ ರವಿವಾರ ಬೆಳಿಗ್ಗೆ ಕದ್ರಿ ಶ್ರೀ ಮಂಜುನಾಥ ದೇವಳದ ಪ್ರಾಂಗಣದಲ್ಲಿ ಧನ್ವಂತರಿ ಪಾರಾಯಣ, ರುದ್ರ ಪಠಣ, ವಿಷ್ಣು ಸಹಸ್ರನಾಮ ಹಾಗೂ ಸಾಮೂಹಿಕ ಪ್ರಾರ್ಥನೆಯನ್ನು ಹಮ್ಮಿಕೊಳ್ಳಲಾಯಿತು.
ಧಾರ್ಮಿಕ, ಸಾಮಾಜಿಕ ಪ್ರಮುಖರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಗೂ ಸಾಮೂಹಿಕ ಪ್ರಾರ್ಥನೆಯಲ್ಲಿ ನೂರಾರು ಮಂದಿ ಭಾಗವಹಿಸಿದರು.




Comments are closed.