ಕರಾವಳಿ

ಕೊರೋನಾ, ಪರಿಹಾರಕ್ಕೆ ದೈವ ದೇವರ ಮೊರೆ ಹೋದ ವಿಶ್ವಹಿಂದೂಪರಿಷತ್

Pinterest LinkedIn Tumblr

ಮಂಗಳೂರು, ಮಾರ್ಚ್.14; ಪ್ರಸ್ತುತ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್ ಪರಿಹರಿಸುವ ನಿಟ್ಟಿನಲ್ಲಿ ಇಂದು ವಿಶ್ವಹಿಂದೂ ಪರಿಷತ್ ವತಿಯಿಂದ ಶ್ರೀ ಸೋಮನಾಥ ದೇವಾಲಯ ಉಳ್ಳಾಲ, ಶ್ರೀಕೃಷ್ಣ ಮುಖ್ಯಪ್ರಾಣ ದೇವಸ್ಥಾನ ಕುಂಪಲ, ಶ್ರೀ ವೈದ್ಯನಾಥ ದೈವಸ್ಥಾನ ಉಳ್ಳಾಲ ಬೈಲ್, ಕೊರಗಜ್ಜ ಆದಿ ದೈವಸ್ಥಾನ ಕುತ್ತಾರ್ ಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು,

ಈ ಸಂಧರ್ಭದಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷರು ಹಾಗು ಜಿಲ್ಲಾ ಧಾರ್ಮಿಕ ಪರಿಷತ್ತಿನ ಸಧಸ್ಯರಾದ ಗೋಪಾಲ್ ಕುತ್ತಾರ್, ಹಿಂದೂ ಸಮಾಜೋತ್ಸವ ಸಮಿತಿ ಉಳ್ಳಾಲ ಇದರ ಅಧ್ಯಕ್ಷರಾದ ಸುಧರ್ಶನ್ ಶೆಟ್ಟಿ ನೆತ್ತಿಲಬಾಳಿಕೆ, ಮತ್ತು ವಿಶ್ವಹಿಂದೂ ಪರಿಷತ್ತಿನ ಜಿಲ್ಲಾ ಸಹಕಾರ್ಯದರ್ಶಿ ರವಿ ಅಸೈಗೋಳಿ, ಬಜರಂಗದಳ ಗೋರಕ್ಷ ಪ್ರಮುಖ್ ಗುರುಪ್ರಸಾದ್ ಉಳ್ಳಾಲ, ದುರ್ಗಾವಾಹಿನಿ ಪ್ರಮುಖ್ ಗೌಶಿತ ಕುತ್ತಾರ್ ಹಾಗು ಉಳ್ಳಾಲ ಪ್ರಖಂಡ ಪ್ರಮುಖರಾದ ಶ್ರೀ ಶೈಲೇಶ್ ಅಡ್ಕ, ಚೇತನ್ ಅಸೈಗೋಳಿ, ನವೀನ್ ಕೊಣಾಜೆ, ಶ್ರೀ ಶಿವಪ್ರಸಾದ್ ಕೊಣಾಜೆ ಉಪಸ್ಥಿತಿ ಇದ್ದರು.

Comments are closed.