ರಾಷ್ಟ್ರೀಯ

ಟಿಕ್ ಟಾಕ್ ವೀಡಿಯೋ ಮಾಡಲು ಹೋಗಿ ಜೀವ ಕಳೆದುಕೊಂಡ

Pinterest LinkedIn Tumblr


ಮುಜಾಫರ್ ನಗರ್ ( ಉತ್ತರ ಪ್ರದೇಶ ) : ಚಲಿಸುತ್ತಿದ್ದ ಟ್ರ್ಯಾಕ್ಟರನ್ನು ವೀಲಿಂಗ್ ( ಚಕ್ರವನ್ನು ಎತ್ತಲು) ಮಾಡಿ, ಟಿಕ್ ಟಾಕ್ ವೀಡಿಯೋ ಮಾಡಲು ಹೋಗಿದ್ದ ಯುವಕ ಸಾವಿಗೀಡದ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದ ಖಿಂದಿಡಿಯ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.

23 ವರ್ಷದ ಕಪಿಲ್ ಎನ್ನುವ ನವ ವಿವಾಹಿತ ಯುವಕ ಚಲಿಸುತ್ತಿದ್ದ ಟ್ರ್ಯಾಕ್ಟರ್ ನಲ್ಲಿ ವೀಲಿಂಗ್ ಮಾಡಿ ಈ ಸಾಹಸಮಯ ವೀಡಿಯೋವನ್ನು ಟಿಕ್ ಟಾಕ್ ನಲ್ಲಿ ಹಂಚಿಕೊಳ್ಳುವವರಿದ್ದರು. ಟ್ರ್ಯಾಕ್ಟರ್ ನ ಮುಂದಿನ ಚಕ್ರವನ್ನು ಎತ್ತುವ ಭರದಲ್ಲಿ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಆತನ ಮೇಲೆ ಉರುಳಿ ಆತ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ.

ಖಿಂದಿಡಿಯ ಗ್ರಾಮದ ಮುಖ್ಯಸ್ಥ ರಿತಿಪರ್ನ್ ಸಿಂಗ್ ಹೇಳುವ ಪ್ರಕಾರ “ ಕಪಿಲ್ ಟ್ರ್ಯಾಕ್ಟರ್ ನಲ್ಲಿ ಸಾಹಸ ಮಾಡುತ್ತಿದ್ದಾಗ ಆತನ ಗೆಳೆಯ ಮೊಬೈಲ್ ನಲ್ಲಿ ವೀಡಿಯೋ ಮಾಡುತ್ತಿದ್ದ, ಈ ಸಂದರ್ಭದಲ್ಲಿ ಸ್ಟೇರಿಂಗ್ ಮೇಲಿನ ನಿಯಂತ್ರಣ ತಪ್ಪಿ ಆತನ ಮೇಲೆ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ” ಎಂದಿದ್ದಾರೆ.

ಗ್ರಾಮಸ್ಥರು ಹೇಳುವ ಪ್ರಕಾರ, ಕಪಿಲ್ ಟ್ರ್ಯಾಕ್ಟರ್ ನ ಮುಂದಿನ ಚಕ್ರವನ್ನು ವೀಲಿಂಗ್ ಮಾಡುವ ಪ್ರಯತ್ನದಲ್ಲಿದ್ದ, ಆಗ ಆತನ ಮೇಲೆ ಟ್ರ್ಯಾಕ್ಟರ್ ಉರುಳಿ ಆತ ಸ್ಥಳದಲ್ಲೇ ಪ್ರಾಣ ತೆತ್ತಿದ್ದಾನೆ ಎಂದು ಹೇಳಿದ್ದಾರೆ.

ಮೃತ ಕಪಿಲ್ ಅಂತಿಮ ವಿಧಿ ವಿಧಾನವನ್ನು ಪೊಲೀಸ್ ರಿಗೆ ತಿಳಿಸದೆ, ಕುಟುಂಬಸ್ಥರು ನೆರವೇರಿಸಿದ್ದಾರೆ. ಈ ಕುರಿತು ಠಾಣೆಯಲ್ಲಿ ಕುಟುಂಸ್ಥರು ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಳೆದ ಹದಿನೈದು ದಿನದ ಹಿಂದೆ, ಗ್ರಾಮದಲ್ಲಿ ಟಿಕ್ ಟಾಕ್ ವೀಡಿಯೋ ಮಾಡುವ ಭರದಲ್ಲಿ ರಾಜ್ ಖುರೇಷಿ ಎಂಬ ಸಾವಿಗೀಡಾಗಿದ್ದ. ಆ ನೋವು ಮಾಸುವ ಮುನ್ನವೇ ಈಗ ಕಪಿಲ್ ಪ್ರಾಣ ಅದೇ ಟಿಕ್ ಟಾಕ್ ಭರಕ್ಕೆ ಬಲಿ ಆಗಿದೆ.

Comments are closed.