
ಬೆಂಗಳೂರು: ಮುಂದಿನ ಜನ್ಮದಲ್ಲಿ ಬಾಳಸಂಗಾತಿಯಾಗುತ್ತೀರಾ ಎಂದ ಅಭಿಮಾನಿಯೋರ್ವನಿಗೆ ನಟಿ ಅನುಪ್ರಭಾಕರ್ ಒಂದು ಒಳ್ಳೆಯ ಸಲಹೆ ನೀಡಿದ್ದಾರೆ.
ಒಂದು ಲಾಂಗ್ ಗ್ಯಾಪ್ನ ನಂತರ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಅನುಪ್ರಭಾಕರ್ ಅವರು, ಸಾಮಾಜಿಕ ಜಾಲತಾಣದಲ್ಲಿ ಯಾವಾಗಲು ಸಖತ್ ಸಕ್ರಿಯವಾಗಿ ಇರುತ್ತಾರೆ. ಇತ್ತೀಚೆಗಷ್ಟೇ ನಿಮಗೆ ವಯಸ್ಸಯ್ತು ಎಂದಿದ್ದ ಅಭಿಮಾನಿಗೆ ಕ್ಲಾಸ್ ತೆಗೆದುಕೊಂಡಿದ್ದ ಅನು, ಈಗ ಅಭಿಮಾನಿಯೋರ್ವನಿಗೆ ಸಲಹೆ ನೀಡಿದ್ದಾರೆ.
ನವೀನ್ ರಾಜ್ ಎಂಬ ಅನುಪ್ರಭಾಕರ್ ಅಭಿಮಾನಿಯೋರ್ವ ಟ್ವಿಟ್ಟರ್ ನಲ್ಲಿ ಅವರ ಒಂದು ಫೋಟೋಗೆ ರೀಟ್ವೀಟ್ ಮಾಡಿದ್ದು, ಸೂಪರ್ ಲುಕ್ ಅನು ನಿಮ್ಮನ್ನ ನೋಡುತ್ತಿದ್ದರೆ ನನ್ನ ಹಳೇ 1999 ಲವ್ ಸ್ಟೋರಿ ಮತ್ತೆ ಓಪನ್ ಆಗುತ್ತೆ. ಮುಂದಿನ ಜನ್ಮದಲ್ಲಿ ನೀವೇ ನನ್ನ ಬಾಳಸಂಗಾತಿಯಾಗಬೇಕು ಎಂದು ನನ್ನ ಆಸೆ ಅದಕ್ಕೆ ನೀವೆನಂತೀರಾ ಎಂದು ಬರೆದುಕೊಂಡಿದ್ದರು.
ಈ ಟ್ವೀಟ್ಗೆ ಉತ್ತರ ನೀಡಿರುವ ಅನುಪ್ರಭಾಕರ್ ಅವರು, ಮೊದಲು ಈ ಜನ್ಮದಲ್ಲಿ ಖುಷಿಯಾಗಿ ಇರಿ. ಮುಂದಿನ ಜನ್ಮ ಆಮೇಲೆ ನೋಡೋಣ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಕೆಲ ಅಭಿಮಾನಿಗಳು ಕಮೆಂಟ್ ಮಾಡಿದ್ದು, ಸೂಪರ್ ಉತ್ತರ ಅನು ಅವರೇ. ಸರಿಯಾಗಿ ಹೇಳಿದ್ದೀರಿ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಅನುಪ್ರಭಾಕರ್ ಅವರು, ನಾನು ಚಿತ್ರರಂಗಕ್ಕೆ ಬರುತ್ತಿದ್ದೇನೆ. ಮತ್ತೆ ಕ್ಯಾಮೆರಾ ಮುಂದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಕಮೆಂಟ್ ಹಾಕಿದ್ದ, ಮಧುಸೂದನ್ ಎಂಬವರು ಸ್ವಲ್ಪ ವಯಸ್ಸಗಿದೆ ಬಿಡಿ ಸಾಕು ಎಂದಿದ್ದರು. ಈ ಕಮೆಂಟ್ ನೋಡಿ ಗರಂ ಆದ ಅನುಪ್ರಭಾಕರ್, ವಯಸ್ಸು ಆದ್ರೆ ಕೆಲಸ ನಿಲ್ಲಿಸಬೇಕಾ ಮಧು? ನೀವು ನನ್ನ ಸಿನಿಮಾ ನೋಡೋ ಅವಶ್ಯಕತೆ ಇಲ್ಲ ಬಿಡಿ. ಕಲಾವಿದರಾಗಿ ನಮ್ಮನ್ನು ಇಷ್ಟ ಪಡುವವರು ನೋಡುತ್ತಾರೆ ಎಂದು ಬರೆದು ಖಾರವಾಗಿ ಪ್ರತಿಕ್ರಿಯಿಸಿದ್ದರು.
Comments are closed.