
ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಪಾಕ್ ಏಜೆಂಟ್ ಎಂದು ಕರೆಯುವ ಮೂಲಕ ಸುದ್ದಿಯಾಗಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಎಡವಟ್ಟು ಮಾಡಿದ್ದಾರೆ.
ಶುಕ್ರವಾರ ಸದನದಲ್ಲಿ ಸಂವಿಧಾನದ ಕುರಿತಾದ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡುತ್ತಾ, ಮಹಾಭಾರತವನ್ನು ಬರೆದಿದ್ದು ಕೀಳುಜಾತಿಯ ವಾಲ್ಮೀಕಿ ಎಂದರು.
ಅಂಬೇಡ್ಕರ್ ಭಾಷಣ ಒಂದನ್ನು ಉಲ್ಲೇಖ ಮಾಡಿ ಸದನದಲ್ಲಿ ಮಾತನಾಡಿದ ಯತ್ನಾಳ್, ಹಿಂದೂಗಳಿಗೆ ವೇದಗಳು ಬೇಕಾಗಿದ್ದವು. ಆಗ ಅವರು ವ್ಯಾಸನನ್ನು ಕರೆದರು. ಅವರಿಗೊಂದು ಮಹಾ ಕಾವ್ಯ ಮಹಾಭಾರತ ಬೇಕಾಗಿತ್ತು, ಆವಾಗ ಅಸ್ಪೃಶ್ಯನಾದ ವಾಲ್ಮಿಕಿ ಬೇಕಾದ. ಇದೀಗ ಸಂವಿಧಾನದ ಅಗತ್ಯವಿದೆ ಅದಕ್ಕಾಗಿ ನನ್ನನ್ನು ಕರೆದರು ಎಂದು ಅಂಬೇಡ್ಕರ್ ಮಾತನ್ನು ಸದನದಲ್ಲಿ ತಪ್ಪಾಗಿ ಉಲ್ಲೇಖ ಮಾಡಿದರು.
ಕೂಡಲೇ ಮಧ್ಯಪ್ರವೇಶ ಮಾಡಿದ ಇತರ ಸದಸ್ಯರು ಯತ್ನಾಳ್ ತಪ್ಪಾಗಿ ಉಲ್ಲೇಖ ಮಾಡಿದ್ದನ್ನು ಗಮನಕ್ಕೆ ತಂದರು. ಮಹಾಭಾರತವನ್ನು ಬರೆದದ್ದು ವ್ಯಾಸ ಮಹರ್ಷಿ ಹಾಗೂ ರಾಮಾಯಣ ಬರೆದಿದ್ದು ವಾಲ್ಮೀಕಿ ಎಂದು ತಪ್ಪನ್ನು ತಿದ್ದಿದರು.
ಅಂಬೇಡ್ಕರ್ ಅವರನ್ನು ದಲಿತ ನಾಯಕ ಎಂದು ಸೀಮಿತಗೊಳಿಸಿದ್ದು ದೇಶದ ದುರಂತ. ಮಹಾಪುರಷರ ಹುಟ್ಟುಹಬ್ಬಕ್ಕೆ ಆಯಾ ಜಾತಿಯ ಜನರು ಮಾತ್ರ ಹೋಗುತ್ತಾರೆ. ಅಲ್ಲೂ ಜಾತಿ ಬಂದು ಬಿಟ್ಟಿದೆ ಎಂದರು.
Comments are closed.