ಮನೋರಂಜನೆ

ಯಾರ ಜೊತೆ ಮಲಗಬೇಕು ಎಂಬ ಆಯ್ಕೆ ಮಹಿಳೆಯರಿಗೆ ಬಿಟ್ಟಿದ್ದು: ನಯನತಾರಾ

Pinterest LinkedIn Tumblr


ಬಹುಭಾಷಾ ನಟಿ ನಯನತಾರಾ ಯಶಸ್ಸಿನ ಉತ್ತುಂಗದಲ್ಲಿದ್ಧಾರೆ. ದೊಡ್ಡ ಮೊತ್ತದ ಸಂಭಾವನೆ ಪಡೆಯುವ ನಯನತಾರಾ ಸಿನಿಮಾ ನೋಡಲು ಕೆಲವು ಪ್ರೇಕ್ಷಕರು ಕಾಯುತ್ತಲೇ ಇರುತ್ತಾರೆ. ತಮಿಳು ಚಿತ್ರರಂಗದ ‘ಲೇಡಿ ಸೂಪರ್ ಸ್ಟಾರ್’ ಎಂದು ಕರೆಸಿಕೊಳ್ಳುವ ನಯನತಾರಾ ಅಭಿಮಾನಿಬಳಗ ತುಂಬ ದೊಡ್ಡದು. ಯಾವ ಹೀರೋಗೂ ಕೂಡ ಇವರು ಕಡಿಮೆ ಇಲ್ಲ ಎನ್ನಬಹುದು. ನಯನತಾರಾ ಸಿನಿಮಾ ಅಲ್ಲದೆ ಅವರ ವೈಯಕ್ತಿಕ ಬದುಕಿನ ವಿಚಾರಕ್ಕೂ ಕೂಡ ಅವರು ಸದ್ದು-ಸುದ್ದಿ ಮಾಡುತ್ತಲೇ ಇರುತ್ತಾರೆ. ಏಕೆಂದರೆ ಈಗಾಗಲೇ ಅವರು ಓರ್ವ ವ್ಯಕ್ತಿಯ ಜೊತೆಗೆ ರಿಲೇಶನ್‌ಶಿಪ್‌ನಲ್ಲಿದ್ದು, ಬ್ರೇಕಪ್ ಆದವರು. ಅದೇ ರೀತಿಯಲ್ಲಿ ಈಗ ಇನ್ನೊಬ್ಬ ವ್ಯಕ್ತಿಯ ಜೊತೆಗೂ ಕೂಡ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಅದನ್ನು ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈಗ ಇವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ರಜನಿಕಾಂತ್ ‘ದರ್ಬಾರ್’ ಸಿನಿಮಾದಲ್ಲಿ ಕೊನೆಯಬಾರಿಗೆ ತೆರೆಮೇಲೆ ಕಾಣಿಸಿಕೊಂಡಿರುವ ನಯನತಾರಾ ಈಗ ನೀಡಿರುವ ಬೋಲ್ಡ್ ಹೇಳಿಕೆ ಒಮ್ಮೆ ಎಲ್ಲರಿಗೂ ಶಾಕ್ ನೀಡಿದೆ. ಹಾಗಂತ ಇದನ್ನು ನಯನತಾರಾ ಹೇಳಿದ್ದಾರೆ ಅಂದುಕೊಳ್ಳಬೇಡಿ. ‘ವೇಲಕಾರನ್’ ಸಿನಿಮಾದಲ್ಲಿ ನಯನತಾರಾ ಮಾತನಾಡಿರುವ ವಿಡಿಯೋ ಇದಾಗಿದೆಯಷ್ಟೇ. ಮಹಿಳೆಯರು ಯಾರ ಜೊತೆ ಇರಬೇಕು? ಯಾರ ಜೊತೆ ಸಂಬಂಧ ಹೊಂದಬೇಕು ಎಂಬುದನ್ನು ಅವರು ನಿರ್ಧರಿಸುವ ಸ್ವಾತಂತ್ರ್ಯವಿದೆ. ಈಗಿನ ಸೋಶಿಯಲ್ ಕಂಡೀಶನ್‌ನ್ನು ನಯನತಾರಾ ಪ್ರಶ್ನಿಸುತ್ತಾರೆ. ಅದಲ್ಲದೆ ಮಹಿಳೆಯರು ಹಲವು ವಿಚಾರದಲ್ಲಿ ತಮ್ಮ ಸ್ವಂತ ನಿರ್ಧಾರ ಕೈಗೊಳ್ಳುವ ಆಯ್ಕೆ ಮಾತ್ರ ಯಾಕೆ ಇರೋದಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ. ಈ ವಿಡಿಯೋ ಮಾರ್ಚ್ 8ರಂದು ಇರುವ ‘ಮಹಿಳಾ ದಿನ’ದ ಪ್ರಯುಕ್ತ ವೈರಲ್ ಆಗುತ್ತಿದೆ ಎನ್ನಲಾಗುತ್ತಿದೆ.

ಶಿವಕಾರ್ತಿಕೇಯನ್ ಜೊತೆಗೆ ‘ವೇಲಕಾರನ್’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ 2017ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾಕ್ಕೆ ಮೋಹನ್ ರಾಜ್ ನಿರ್ದೇಶನ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಕಂಡಿತ್ತು.

Comments are closed.