ಕರಾವಳಿ

ಎಣ್ಣೆ ತ್ವಚೆ ಜೊತೆಗೆ ಮುಖದ ಮೇಲೆ ಇರುವ ಗುಳ್ಳೆ ಮಾಯವಾಗಬೇಕೆ ಈ ರೀತಿ ಮಾಡಿ

Pinterest LinkedIn Tumblr

ಮುಖದ ಸೌಂದರ್ಯ ಪ್ರತಿಯೊಬ್ಬರಿಗೂ ಕೂಡ ತುಂಬಾ ಮುಖ್ಯ ಮುಖದ ಮೇಲಿನ ಚಿಕ್ಕ ಚಿಕ್ಕ ರಂಧ್ರಗಳಿಂದ ನಿಮ್ಮ ಚರ್ಮ ತನ್ನ ಕಾಂತಿ ಯನ್ನು ಹಾಗೇನೇ ಹೊಳಪನ್ನು ಕಳೆದುಕೊಂಡು ನೀವು ವಯಸ್ಸಾದಂತೆ ಕಾಣುತ್ತಿರ ಅಷ್ಟೇ ಅಲ್ಲದೆ ಇದರಿಂದ ಹೀಗೆ ಆಗುವುದರಿಂದ ಮುಖದ ಮೇಲೆ ಗುಳ್ಳೆಗಳು ಹೆಚ್ಚುತ್ತವೆ ಹಾಗೇನೇ ಕಪ್ಪು ಕಲೆಗಳು ಕೂಡ ಆಗುತ್ತವೆ ಜೋತೆಗೆ ಎಣ್ಣೆ ತ್ವಚೆಯನ್ನು ಹೊಂದಿರುವವರು ಕೂಡ ಈ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಇವತ್ತಿನ ಈ ಲೇಖನದಲ್ಲಿ ಮುಖದ ಮೇಲಿನ ರಂಧ್ರಗಳನ್ನು ಹೇಗೆ ಮನೆ ಮದ್ದುಗಳನ್ನು ಬಳಸಿ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ಈಗ ತಿಳಿಯೋಣ.

ಈ ಮನೆ ಮದ್ದುಗಳನ್ನು ನೀವು ಸರಿಯಾದ ರೀತಿಯಲ್ಲಿ ಬಳಸುವುದರಿಂದ ನೀವು ಕಳೆದುಕೊಂಡ ಹೊಳಪು ರಹಿತ ಚರ್ಮವು ಹೊಳೆಯು ತ್ತದೆ ತುಂಬಾನೇ ಕಾಂತಿಯುಕ್ತ ವಾಗುತ್ತದೆ ಅಷ್ಟೇ ಅಲ್ಲದೆ ನೀವು ವಯಸ್ಸಾದರು ಕೂಡ ಯುವಕರಂತೆ ಕಾಣುತ್ತಿರ. ಮೊದಲನೇ ಮನೆಮದ್ದು ಒಂದು ಬಟ್ಟಲು ತೆಗೆದುಕೊಳ್ಳಿ ಅದರಲ್ಲಿ ಒಂದು ಟೊಮೆಟೋ ತೆಗೆದುಕೊಂಡು ಪೂರ್ತಿ ರಸವನ್ನು ಬಟ್ಟಲಿಗೆ ಹಿಂಡಿಕೊಳ್ಳಿ ನಂತರ ಈ ಟೊಮೊಟೊ ರಸಕ್ಕೆ ಕೆಲವು ಹನಿ ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ

ಈ ಮಿಶ್ರಣವನ್ನು ಕೈಯಿಂದ ಅಥವಾ ಹತ್ತಿಯಿಂದ ನಿಮ್ಮ ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆ ಬಿಡಿ ನಂತರ ತಣ್ಣಗಿನ ನೀರಿನಲ್ಲಿ ನಿಮ್ಮ ಮುಖವನ್ನು ತೊಳೆದುಕೊಳ್ಳಿ ಟೊಮೆಟೊ ಮತ್ತು ನಿಂಬೇಹಣ್ಣಿನಲ್ಲಿ ಇರುವ ಆಸಿಡ್ ಅಂಶ ನಿಮ್ಮ ತ್ವಚೆಯನ್ನು ತುಂಬಾ ಚೆನ್ನಾಗಿ ಕಾಪಾಡಿ ಹೊಳೆಯುವಂತೆ ಮಾಡುತ್ತದೆ ಈ ಮಿಶ್ರಣವು ನಿಮ್ಮ ಮುಖದಲ್ಲಿನ ಎಣ್ಣೆಯನ್ನು ಕಡಿಮೆ ಮಾಡುವುದರ ಜೋತೆಗೆ ಗುಳ್ಳೆಗಳನ್ನು ಕೂಡ ನಿವಾರಿಸುತ್ತದೆ ಮತ್ತು ಅದರಿಂದಾದ ಚಿಕ್ಕ ಚಿಕ್ಕ ರಂಧ್ರಗಳನ್ನು ನಿವಾರಿಸುವುದಲ್ಲದೆ ಸುಕ್ಕಾದ ತ್ವಚೆಯನ್ನು ಕೂಡ ಗುಣ ಪಡಿಸುವುದರ ಜೋತೆಗೆ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಇನ್ನು ಎರಡನೇ ಮನೆಮದ್ದು ನೋಡೋದಾದ್ರೆ ಇದಕ್ಕೆ ಬೇಕಾದ ಸಾಮಗ್ರಿಗಳು. ನಿಂಬೆಹಣ್ಣಿನ ರಸ ಸೌತೆಕಾಯಿ ರಸ ಗುಲಾಬಿ ನೀರು ಹಾಗಾದರೆ ಈ ಮನೆಮದ್ದನ್ನು ತಯಾರಿಸುವ ವಿಧಾನ ನೋಡೋದಾದ್ರೆ ಒಂದು ಚಿಕ್ಕ ಚಿಮುಕಿಸುವ ಬಾಟಲಿಯಲ್ಲಿ ಒಂದು ಚಮಚ ನಿಂಬೆರಸ ಒಂದು ಲೋಟ ಗುಲಾಬಿ ನೀರು ಮತ್ತು ಅರ್ಧ ಲೋಟ ಸೌತೆಕಾಯಿ ರಸವನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ನಂತರ ಮುಖವನ್ನು ತೊಳೆದು ಈ ಮಿಶ್ರಣವನ್ನು ಮುಖದ ಎಲ್ಲ ಭಾಗಕ್ಕೆ ಚಿಮುಕಿಸಿಕೊಳ್ಳಿ 15 ನಿಮಿಷ ಹಾಗೆ ಒಣಗಲು ಬಿಡಿ ಇದಾದ ನಂತರ ನೀವು ಪ್ರತಿದಿನ ಬಳಸುವ ಮುಖದ ಕ್ರೀಮನ್ನು ನೀವು ಧಾರಾಳವಾಗಿ ಬಳಸಬಹುದು ಈ ಮಿಶ್ರಣವನ್ನು ಒಂದು ಟೋನರ್ ರೀತಿಯಲ್ಲಿ ನೀವು ಮುಖಕ್ಕೆ ಬಳಸಬಹುದು.

ಮೂರನೇ ಒಂದು ಮನೆಮದ್ದನ್ನು ನೋಡೋದಾದ್ರೆ ಬೇಕಾಗಿರುವ ಸಾಮಗ್ರಿಗಳು ಹೀಗಿವೆ ಮೊಟ್ಟೆಯ ಬಿಳಿ ಭಾಗ ನಿಂಬೆರಸ ಈ ಮಾಸ್ಕ ಮುಖದಲ್ಲಿ ಇರುವ ಕೆಟ್ಟ ಎಣ್ಣೆಯನ್ನು ತೆಗೆದು ಹಾಕಿ ಮುಖದ ಕಾಂತಿ ಮತ್ತು ಹೊಳಪನ್ನು ಹೆಚ್ಚಿಸುತ್ತದೆ ಇದನ್ನು ಈರೀತಿಯಾಗಿ ತಯಾರಿಸಬೇಕು ಒಂದು ಬಟ್ಟಲಿನಲ್ಲಿ ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಳ್ಳಿ ಇದಕ್ಕೆ ಅರ್ಧ ಚಮಚ ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿ ಈ ಮಿಶ್ರಣವನ್ನು ಮೊದಲು ನಿಮ್ಮ ಮುಖವನ್ನು ಚೆನ್ನಾಗಿ ತೊಳೆದು ನಂತರ ಮುಖಕ್ಕೆ ಒಂದೇ ತೆರನಾಗಿ ಹಚ್ಚಿ ಒಣಗಲು ಬಿಡಿ ನಂತರ ತಣ್ಣೀರಿನಲ್ಲಿ ನಿಮ್ಮ ಮುಖವನ್ನು ನಿಧಾನವಾಗಿ ತೊಳೆದು ನಿಧಾನವಾಗಿ ಮೃದು ಬಟ್ಟೆಯಿಂದ ಒರೆಸಿಕೊಳ್ಳಿ ಈ ಒಂದು ಮನೆಮದ್ದಿನಲ್ಲಿ ಬಳಸಿರುವ ಮೊಟ್ಟೆಯ ಬಿಳಿ ಭಾಗ ಮುಖದ ಮೇಲಿನ ಕೊಳೆಯನ್ನು ತೆಗೆದು ರಂಧ್ರಗಳನ್ನು ಸ್ವಚ್ಛಗೊಳಿಸಿ ಸುಕ್ಕು ಗಟ್ಟಿದ ಚರ್ಮವನ್ನು ನಿವಾರಿಸುವುದರ ಜೊತೆಗೆ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಇನ್ನು ನಿಮಗೆ ಒಳ್ಳೆಯ ಫಲಿತಾಂಶ ಬರಬೇಕಾದರೆ ವಾರದಲ್ಲಿ ಎರಡು ಬಾರಿ ಹಿಗೆ ನೀವು ಮಾಡಿದರೆ ನಿಮ್ಮ ಮುಖ ತುಂಬಾ ಚೆನ್ನಾಗಿ ಯಾವುದೇ ಕಲೆಗಳು ಇಲ್ಲದಂತೆ ರಂಧ್ರಗಳು ಇಲ್ಲದಂತೆ ಹೊಳೆಯುವ ಮುಖ ನಿಮ್ಮದಾಗುತ್ತದೆ.

Comments are closed.