ಮನೋರಂಜನೆ

ಶೀಘ್ರದಲ್ಲೇ ಮುಕ್ತಾಯವಾಗಲಿರುವ ಸೂಪರ್ ಹಿಟ್ ಧಾರಾವಾಹಿ!

Pinterest LinkedIn Tumblr


ಕನ್ನಡದಲ್ಲಿ ಈ ವರ್ಷ ಎಷ್ಟೋ ಧಾರಾವಾಹಿಗಳು ಮುಗಿದಿವೆ, ಹೊಸ ಧಾರಾವಾಹಿ ಆರಂಭವಾಗಿದೆ. ಈ ಹಿಂದೆ ಪ್ರಸಾರವಾಗಿ ಸೂಪರ್ ಹಿಟ್ ಆಗಿದ್ದ ಧಾರಾವಾಹಿಯೊಂದು ವರ್ಷದ ಹಿಂದೆ ಸ್ವಲ್ಪ ಬದಲಾವಣೆಯೊಂದಿಗೆ ಪುನಃ ಆರಂಭವಾಗಿತ್ತು. ಈಗ ಟಿಆರ್‌ಪಿ ಕಾರಣಕ್ಕೆ ಇದು ಅಂತ್ಯವಾಗುತ್ತಿದೆ.

ಜನಪ್ರಿಯ ‘ಪಾಪ ಪಾಂಡು’ ಧಾರಾವಾಹಿ ಮತ್ತೆ ತೆರೆಮೇಲೆ ಬರುತ್ತಿದೆ ಎಂದಾಗ ಹಲವರು ಈ ವಿಷಯ ಕೇಳಿ ಖುಷಿಯಾಗಿದ್ದರು. ಆದರೆ ಪ್ರೇಕ್ಷಕರ ನಿರೀಕ್ಷೆಯನ್ನು ತಲುಪಲಾಗದೆ ಈ ಸೀರಿಯಲ್ ಅಂತ್ಯವಾಗುತ್ತಿದೆ. ಸಿಹಿಕಹಿ ಚಂದ್ರು ಈ ಧಾರಾವಾಹಿಯ ನಿರ್ದೇಶನ ಮಾಡಿದ್ದರು. ಶಾಲಿನಿ ಮತ್ತು ಚಿದಾನಂದ್ ಈ ಸೀರಿಯಲ್‌ನಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಶ್ರುತಿ ರಮೇಶ್, ಸೌರಭ್ ಕುಲಕರ್ಣಿ ಈ ಧಾರಾವಾಹಿಯ ತಾರಾಗಣದಲ್ಲಿದ್ದರು. ‘ಪಾಪ ಪಾಂಡು’ ಧಾರಾವಾಹಿ ಒಂದೂವರೆ ವರ್ಷಗಳ ಕಾಲ ಪ್ರಸಾರವಾಗಿದೆ. ಶಾಲಿನಿ ಅವರು ಧಾರಾವಾಹಿಯಲ್ಲಿ ತಮ್ಮ ಗಂಡ ಪಾಂಡು ಮತ್ತು ಮಗ ಪುಂಡನನ್ನು ಕಂಟ್ರೋಲ್ ಮಾಡುತ್ತಾರೆ. ಇದರ ಸುತ್ತವೇ ನಿತ್ಯವೂ ಕಥೆ ಸಾಗುತ್ತದೆ.

ಶ್ರುತಿ ರಮೇಶ್ ಅವರು ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ “ನನಗೆ ‘ಪಾಪ ಪಾಂಡು’ ಬಗ್ಗೆ ಸಿಕ್ಕಾಪಟ್ಟೆ ಮೆಸೇಜ್ ಬರುತ್ತಿದೆ. ಹೌದು ಈ ಧಾರಾವಾಹಿ ಅಂತ್ಯವಾಗುತ್ತಿದೆ. ಈ ಧಾರಾವಾಹಿಯಲ್ಲಿ ಎಲ್ಲವನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ನಿಮ್ಮಿಯಾಗಿ ನಾನು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದೆ. ನನ್ನ ಜೀವನಪೂರ್ತಿ ಈ ನೆನಪು ಇರುತ್ತೆ. ಇಂತಹ ಒಂದು ಒಳ್ಳೆಯ ಅವಕಾಶ ಕೊಟ್ಟಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಪ್ರತಿಯೊಂದು ಅಂತ್ಯವೂ ಹೊಸದೊಂದಕ್ಕೆ ಕಾರಣ ಆಗುತ್ತದೆ ಎಂದು ನಂಬುತ್ತೇನೆ. ಹೊಸ ಪ್ರಾಜೆಕ್ಟ್‌ನೊಂದಿಗೆ ಮತ್ತೆ ನಿಮ್ಮನೆಲ್ಲ ರಂಜಿಸಲು ಬರುತ್ತೇಬೆ. ಪ್ರೋತ್ಸಾಹಿಸಿ, ಆಶೀರ್ವದಿಸಿ, ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

Comments are closed.