ಕರಾವಳಿ

ಜ್ಞಾನದ ಅನ್ವಯ, ಅನ್ವೇಷಣಾ ಮನೋಭಾವ ಬೆಳೆಸಿಕೊಳ್ಳಿ : ವಿನಾಯಕ ಕಾಮತ್

Pinterest LinkedIn Tumblr

ಮಂಗಳೂರು: ಯುವ ವಿದ್ಯಾಥರ್ಿಗಳು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಆಸಕ್ತಿವಹಿಸಬೇಕು. ಆಸಕ್ತಿಯ ಕಲಿಕೆ, ಜ್ಞಾನದ ಅನ್ವಯ, ಪ್ರಶ್ನಿಸುವ, ಅನ್ವೇಷಣಾ ಮನೋಭಾವ ಬೆಳೆಸಿಕೊಳ್ಳಿ ಎಂದು ಬೆಂಗಳೂರಿನ ಏಸ್ ಗ್ರೂಫ್ ಆಫ್ ಇಂಡಸ್ಟ್ರೀಸ್ನ ಅಟೋ ಸಿಎನ್ಸಿ ಸಿಇಒ ಎಂ. ವಿನಾಯಕ ಡಿ. ಕಾಮತ್ ಹೇಳಿದರು.

ಅವರು ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರಂಭಗೊಂಡ ಮೂರು ದಿನಗಳ ರಾಜ್ಯ ಮಟ್ಟದ ತಾಂತ್ರಿಕ, ಸಾಂಸ್ಕೃತಿಕ ಸ್ಫರ್ಧೆ ಆಕೃತಿ -2020 ಉದ್ಘಾಟಿಸಿ ಮಾತನಾಡಿದರು.

ಹಕ್ಕಿನ ಬಗ್ಗೆ ಮಾತನಾಡುವ ಯುವ ವಿದ್ಯಾಥರ್ಿಗಳು ಕರ್ತವ್ಯ ಮರೆಯಬಾರದು. ಟೀಂ ವಕರ್್ ಸಂಸ್ಕೃತಿ, ಉದಾತ್ತ ಚಿಂತನೆ,ಉತ್ತಮ ಸಂವಹನ ಕೌಶಲ, ಬೆಳೆಸಿಕೊಳ್ಳಬೇಕು. ಆ ಮೂಲಕ ತ್ವರಿತವಾಗಿ ಬದಲಾಗುತ್ತಿರುವ ಸಾಮಾಜಿಕ, ಕೈಗಾರಿಕಾ ವಲಯದಲ್ಲಿ ಅಗತ್ಯಕ್ಕೆ ತಕ್ಕಂತೆ ರೂಪುಗೊಳ್ಳಬೇಕು ಎಂದವರು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಉಪಾಧ್ಯಕ್ಷ ಎಂ.ಅಣ್ಣಪ್ಪ ಪೈ ಅಧ್ಯಕ್ಷತೆವಹಿಸಿದ್ದರು.
ಕಾರ್ಯದಶರ್ಿ ಎಂ. ರಂಗನಾಥ ಭಟ್, ಕೋಶಾಧಿಕಾರಿ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಸಹ ಕೋಶಾಧಿಕಾರಿ ಎಂ.ವಾಮನ ಕಾಮತ್. ಸದಸ್ಯರಾದ ಕೊಚ್ಚಿಕಾರ್ ಸುಧಾಕರ ಪೈ, ಬಸ್ತಿ ಪುರುಷೋತ್ತಮ ಶೆಣೈ, ಎಂ. ಗಣೇಶ್ ಕಾಮತ್, ಎಂ.ಸುರೇಶ್ ಕಾಮತ್, ಆಡಳಿತ ಕೌನ್ಸಿಲ್ನ ರಮೇಶ್ ಕಾಮತ್, ಎಂ.ಗೋಪಾಲ್ ರಾವ್, ಆಕೃತಿ ಸಂಚಾಲಕರಾದ ಡಾ. ಪರಮಶಿವಯ್ಯ ಬಿ.ಎಂ. ಡಾ.ಎನ್. ಸತೀಶ್ ಕುಮಾರ್ ಉಪಸ್ಥಿತರಿದ್ದರು.

ಕಾಲೇಜಿನ ಸಂಚಾಲಕ ಎಂ.ಪದ್ಮನಾಭ ಪೈ ಸ್ವಾಗತಿಸಿದರು. ಪ್ರಾಂಶುಪಾಲ ಡಾ. ಗಣೇಶ್ ವಿ.ಭಟ್ ವರದಿ ವಾಚಿಸಿದರು. ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ. ಬಿ.ಕೃಷ್ಣ ಪ್ರಭು ಅತಿಥಿಗಳನ್ನು ವಿದ್ಯಾಥರ್ಿ ಸೌರಭ್ ಹೆಗ್ಡೆ, ಶ್ರೀನಿಧಿ ಪೈ ಸಮ್ಮಾನಿತರನ್ನು ಪರಿಚಯಿಸಿದರು.
ವಿದ್ಯಾಥರ್ಿಗಳಾದ ನಗರ್ ಆದಿತ್ಯ ಶೆಣೈ, ರಕ್ಷಿತಾ ಗೋಕುಲ್ದಾಸ್ ಅನಿಸಿಕೆ, ಶುಭಾಶಂಸನೆಗೈದರು.

ಹಳೆ ವಿದ್ಯಾಥರ್ಿನಿ ಸ್ನೇಹಾ ನಾಯಕ್ ಅನಿಸಿಕೆ ಹಂಚಿಕೊಂಡರು. ಡಾಕ್ಟರೇಟ್ ಪದವೀಧರ ಪ್ರಾಧ್ಯಾಪಕರು, ಸಾಧಕ ವಿದ್ಯಾಥರ್ಿಗಳು, ಹಳೆ ವಿದ್ಯಾಥರ್ಿಗಳನ್ನು ಗೌರವಿಸಲಾಯಿತು. ಆಕೃತಿವಿದ್ಯಾಥರ್ಿ ಸಂಚಾಲಕ ಆದಿತ್ಯ ಶೇಟ್ ವಂದಿಸಿದರು. ವಿದ್ಯಾಥರ್ಿನಿ ನಿಧಿ ಪೈ ಕಾರ್ಯಕ್ರಮ ನಿರೂಪಿಸಿದರು.

Comments are closed.