ಕರಾವಳಿ

ಮೇ ಅಂತ್ಯದೊಳಗೆ ಬಸ್ರೂರು ಮೂರುಕೈ ಅಂಡರ್ ಪಾಸ್ ಪೂರ್ಣ: ಕೆ. ಜಯಪ್ರಕಾಶ್ ಹೆಗ್ಡೆ

Pinterest LinkedIn Tumblr

ಕುಂದಾಪುರ: ಇಲ್ಲಿನ ಶಾಸ್ತ್ರಿ ವೃತ್ತದ ಬಳಿಯ ಪ್ಲೇ ಓವರ್ ನಿರೀಕ್ಷೆಯಂತೆ ಕಾಮಗಾರಿ ವೇಗ ಪಡೆದುಕೊಂಡಿದೆ. ಇದೇ ಸ್ಪೀಡಲ್ಲಿ ಕೆಲಸ ನಡೆದರೆ ಪ್ಲೇ ಓವರ್ ಏಪ್ರಿಲ್ ಹಾಗೂ ಬಸ್ರೂರು ಮೂರುಕೈ ಅಂಡರ್ ಪಾಸ್ ಮೇ ತಿಂಗಳಲ್ಲಿ ಸಂಚಾರಕ್ಕೆ ಮುಕ್ತವಾಗುತ್ತದೆ. ಹೈವೇ ಕೆಲಸ ಸಂಪೂರ್ಣ ಮುಗಿದ ನಂತರ ಹೇವೇ ಸಮೀಕ್ಷೆ ನಡೆಸಿ, ಅಪಘಾತ ವಲಯ, ಯೂ ಟರ್ನ್, ಡಿವೈಡರ್ ಮುಂತಾದ ಸಂಗತಿಗಳ ಗಮನಿಸಿ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ. ಎಲ್ಲೆಲ್ಲೂ ಯೂಟರ್ನ್, ಡಿವೈಡರ್, ಬ್ಯಾರಿಕೆಟ್ ಇಡುವುದರಿಂದ ಸೂಪರ್ ಪಾಸ್ಟ್ ಹೈವೇ ಅರ್ಥ ಕಳೆದುಕೊಳ್ಳುತ್ತದೆ. ಎಂದು ಕುಂದಾಪುರ ಬಸ್ರೂರು ಬಳಿ ಅಂಡರ್ ಪಾಸ್ ಕಾಮಗಾರಿ ವೀಕ್ಷಿಸಿ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಶಾಸ್ತ್ರಿ ಸರ್ಕಲ್ ಬಳಿಯಿರುವ ಮೇಲ್ಸೆತುವೆ ಕಾಮಗಾರಿ ಮಾಚ್ ಅಂತ್ಯಕ್ಕೆ ಹಾಗೂ ಬಸ್ರೂರು ಮೂರುಕೈ ಬಳಿಯಿರುವ ಅಂಡರ್‌ಪಾಸ್ ಕಾಮಗಾರಿ ಮೇ ಅಂತ್ಯದೊಳಗೆ ಪೂರ್ಣಗೊಳ್ಳುವ ಭರವಸೆ ಸಂಬಂಧಪಟ್ಟ ಅಧಿಕಾರಿಗಳು, ಇಂಜಿನಿಯರ್‍ಸ್ ಕೊಟ್ಟಿದ್ದಾರೆ ಕೆಲಸದ ವೇಗ ನೋಡಿದರೆ ಕೊಟ್ಟ ಭರವಸೆ ಈಡೀರುವ ಆಶಾಭಾವನೆ ಮೂಡಿಸುತ್ತದೆ ಎಂದು ಹೇಳಿದರು.

ಕೋಡಿಗೆ ವಿನಾಯಕದ ಬಳಿ ಸಂಪರ್ಕ ರಸ್ತೆ ಕಲ್ಪಿಸುವ ಬಗ್ಗೆ ಈಗಾಗಲೇ ಸಂಸದರ ಗಮನಕ್ಕೆ ತರಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡ ಈ ಸಂಬಂಧ ಗಮನವಹಿಸಲಿದ್ದಾರೆ. ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿದೆ. ನಿಗದಿತ ಅವಧಿಯೊಳಗೆ ಮುಗಿಯುವ ಸಾಧ್ಯತೆಯಿದೆ ಎಂದವರು ಸ್ಪಷ್ಟಪಡಿಸಿದರು.

ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ್ ಶೆಟ್ಟಿ ಮಾತನಾಡಿ, ಅಂಡರ್‌ಪಾಸ್ ಹಾಗೂ ಮೇಲ್ಸೆತುವೆ ಕಾಮಗಾರಿ ಭರದಿಂದ ಸಾಗುತ್ತಿದೆ. ಆದರೆ ಇನ್ನೂ ಕೂಡ ಕುಂದಾಪುರದ ಜನರಿಗೆ ಕೆಲವೊಂದು ಅಡೆ ತಡೆಗಳಿದ್ದು, ಇದನ್ನು ನಿವಾರಿಸಬೇಕು ಎಂದವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹೆದ್ದಾರಿ ಹೋರಾಟ ಸಮಿತಿಯ ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಜಿ.ಕೆ. ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

ಬೆಂಗಳೂರು ಕಾರವಾರ ರೈಲ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಅಷ್ಟೇ ಅಲ್ಲಾ ಮಾ.೭ ರಿಂದ ಡೆಮೋ ರೈಲ್ ಓಡಾಟ ಆರಂಭಿಸಲಿದೆ. ಕರಾವಳಿ ತೀರದ ಜನರ ಆಶೋತ್ತರಕ್ಕೆ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಸ್ಪಂದಿಸಿದ್ದರಿಂದ ಹಾಗೂ ರೈಲ್ವೆ ಹಿತರಕ್ಷಣಾ ಸಮಿತಿ ಹೋಟ ದಿಂದ ಬದುದಿನ ಕನಸು ಈಡೇರಿದೆ. ರೈಲ್ವೆ ಓಡಲಾಟಕ್ಕೆ ಅನುಕೂಲ ಮಾಡಿಕೊಟ್ಟ ಸುರೇಶ್ ಅಂಗಡಿ ನಡೆ ಶ್ಲಾಘನೀಯ.
– ಕೆ.ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ.

ಕುಂದಾಪುರ ಕೆ‌ಎಸ್ಸ್‌ಆರ್‌ಟಿಸಿ ಬಳಿ ಡೈವರ್ಶನ್ ನೀಡಿದಿದ್ದರೆ, ಸರ್ಕಾರಿ ಎಲ್ಲಾ ಬಸ್ಸುಗಳು ಸಂಗಮ್ ಬಳಿ ಡೈವರ್ಶನ್ ಪಡೆದು ಕೆ‌ಎಸ್‌ಆರ್‌ಟಿಸಿ ಸ್ಟ್ಯಾಂಡಿಗೆ ಬರಬೇಕಾಗುತ್ತದೆ. ಸ್ಟಾಂಡ್‌ನಿಂದ ಭಟ್ಕಳ ಹುಬ್ಬಳಿ ಕಡೆ ಹೋಗುವ ಬಸ್ಸುಗಳು ಪುನಹಾ ಶಾಸ್ತ್ರಿ ವೃತ್ತಕ್ಕೆ ಬಂದು ಡೈವರ್ಶನ್ ಪಡೆದು ಮುಂದಕ್ಕೆ ಹೋಗಬೇಕು. ಈ ಎಲ್ಲಾ ಅಪಸೌವ್ಯ ತಪ್ಪಿಸಲು ಡೈವರ್ಶನ್ ಸಹಕಾರಿಯಾಗಲಿದೆ.
– ಕೆಂಚನೂರು ಸೋಮಶೇಖರ ಶೆಟ್ಟಿ, ಅಧ್ಯಕ್ಷ, ಹೆದ್ದಾರಿ ಹೋರಾಟ ಸಮಿತಿ

Comments are closed.