
ಮುಂಬಯಿ: ಭಾರತದಲ್ಲಿ 2019 ರಲ್ಲಿ ಪ್ರತೀ ತಿಂಗಳಿಗೆ 3 ಬಿಲಿಯನೇರ್ಗಳು ಹೆಚ್ಚುತ್ತಿದ್ದಾರೆ. ಆದ್ದರಿಂದ ದೇಶದ ಕೋಟ್ಯಧಿಪತಿಗಳ ಸಂಖ್ಯೆ 138ಕ್ಕೇರಿದೆ. ಜಾಗತಿಕವಾಗಿ ಅತಿಹೆಚ್ಚು ಬಿಲಿಯನೇರ್ಗಳನ್ನು ಹೊಂದಿದ ದೇಶಗಳ ಪೈಕಿ ಭಾರತಕ್ಕೆ 3ನೇ ಸ್ಥಾನ. 799 ಬಿಲಿಯನೇರ್ಗಳನ್ನು ಹೊಂದಿರುವ ಚೀನ, 626 ಬಿಲಿಯನೇರ್ಗಳನ್ನು ಹೊಂದಿರುವ ಅಮೆರಿಕ ಮೊದಲೆರಡು ಸ್ಥಾನ ಹೊಂದಿವೆ.
ಚೀನದಲ್ಲಿ ಬಿಲಿಯನೇರ್ಗಳ ಸಂಖ್ಯೆ ವಾರಕ್ಕೆ ಮೂರರಂತೆ ಏರುತ್ತದೆ. ಜಾಗತಿಕವಾಗಿ 2019ರಲ್ಲಿ 480 ಬಿಲಿಯನೇರ್ಗಳು ಹೆಚ್ಚಾಗಿದ್ದಾರೆ. ಅಂದರೆ ದಿನಕ್ಕೆ ಒಬ್ಬರಿಗಿಂತ ಜಾಸ್ತಿ. ಅಚ್ಚರಿಯೆಂದರೆ ಭಾರತದಲ್ಲಿ ಅತಿಹೆಚ್ಚು ಅಂದರೆ 50 ಬಿಲಿಯನೇರ್ಗಳು ಹೊಂದಿರುವ ನಗರ ಮುಂಬಯಿ.
ಜಗತ್ತಿನಲ್ಲಿ ಮುಂಬಯಿ 9ನೇ ಸ್ಥಾನದಲ್ಲಿದೆ. ಇನ್ನು ಬೆಂಗಳೂರಿನಲ್ಲಿ 17 ಬಿಲಿಯನೇರ್ಗಳಿದ್ದಾರೆ. 67 ಬಿಲಿಯನ್ ಡಾಲರ್ ಹೊಂದಿರುವ ಮುಖೇಶ್ ಅಂಬಾನಿ, ಭಾರತದ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
Comments are closed.