ಕರಾವಳಿ

ವಿವಿಧ ಕ್ಷೇತ್ರಗಳಲ್ಲಿ ಪುರಸ್ಕ್ರತರಾದ ಗೃಹರಕ್ಷಕ ಅಧಿಕಾರಿಗಳಿಗೆ ಸನ್ಮಾನ

Pinterest LinkedIn Tumblr

ಉಡುಪಿ: ವಿವಿಧ ಕ್ಷೇತ್ರಗಳಲ್ಲಿ ಪುರಸ್ಕ್ರತರಾದ ಗೃಹರಕ್ಷಕ ಅಧಿಕಾರಿಗಳು ಹಾಗೂ ಗೃಹರಕ್ಷಕರಿಗೆ ಜಿಲ್ಲಾ ಸಮಾದೇಷ್ಟ ಡಾ. ಪ್ರಶಾಂತ್ ಶೆಟ್ಟಿ ಅಧ್ಯಕ್ಷತೆಯಲ್ಲಿ, ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಬುಧವಾರ ಸನ್ಮಾನ ಸಮಾರಂಭ ನಡೆಯಿತು.

ಅಧ್ಯಕ್ಷತೆ ವಹಿಸಿದ ಡಾ.ಪ್ರಶಾಂತ್ ಶೆಟ್ಟಿ ಮಾತನಾಡಿ, ತಮ್ಮ ಉತ್ತಮ ಸೇವೆ ಹಾಗೂ ಪರಿಶ್ರಮ ತಮಗೆ ಕೀರ್ತಿಯನ್ನು ತಂದುಕೊಡುವುದರೊಂದಿಗೆ ಇಲಾಖೆಗೆ ಹಾಗೂ ಉಡುಪಿ ಜಿಲ್ಲೆಗೆ ಕೀರ್ತಿಯನ್ನು ತಂದುಕೊಟ್ಟಿದೆ. ಇನ್ನು ಮುಂದೆಯೂ ತಮ್ಮಿಂದ ಉತ್ತಮ ರೀತಿಯ ಸೇವೆಯನ್ನು ಇಲಾಖೆ ಬಯಸುತ್ತದೆ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಉತ್ತಮ ಸೇವೆಗಾಗಿ ರಾಷ್ಟ್ರಪತಿಗಳ ಪದಕ ಪಡೆದಿರುವ ಬ್ರಹ್ಮಾವರ ಘಟಕದ ಘಟಕಾಧಿಕಾರಿ ಮಂಜುನಾಥ್ ಶೆಟ್ಟಿಗಾರ್, ಮಾನ್ಯ ಮುಖ್ಯಮಂತ್ರಿಗಳ ಪದಕ ಪಡೆದಿರುವ ಕಾಪು ಘಟಕದ ಘಟಕಾಧಿಕಾರಿ ಲಕ್ಷ್ಮಿನಾರಾಯಣ್ ರಾವ್ ಹಾಗೂ ಜನವರಿ 7 ರಿಂದ 18 ರ ವರೆಗೆ ಬೆಂಗಳೂರಿನ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಅಕಾಡೆಮಿಯಲ್ಲಿ ನಡೆದ ರಾಜ್ಯ ಮಟ್ಟದ ಗೃಹರಕ್ಷಕರ “ ಪ್ರಥಮ ಚಿಕಿತ್ಸೆ ಚಿಕಿತ್ಸೆ “ತರಬೇತಿಯಲ್ಲಿ ಚಿನ್ನದ ಪದಕ ಪಡೆದ ಕಾರ್ಕಳ ಘಟಕದ ಗೃಹರಕ್ಷಕ ಶಿವಪ್ರಸಾದ್ ರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಉಪಸಮಾದೇಷ್ಟ ರಮೇಶ್ ಸಮ್ಮಾನಿತರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಮಣಿಪಾಲ ಘಟಕದ ಘಟಕಾಧಿಕಾರಿ ಸರಸ್ವತಿ, ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು. ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ವಂದಿಸಿದರು.

Comments are closed.