ಕರ್ನಾಟಕ

ಎಂಬಿಎ ವಿದ್ಯಾರ್ಥಿಯಿಂದ ಮತ್ತು ಬರುವ ಔಷಧಿ ಹಾಕಿ ವಿದ್ಯಾರ್ಥಿನಿಯ ಅತ್ಯಾಚಾರ

Pinterest LinkedIn Tumblr


ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿ ಮೇಲೆ ಸಹ ವಿದ್ಯಾರ್ಥಿಯೇ ಅತ್ಯಾಚಾರ ಎಸಗಿರುವ ಆರೋಪವೊಂದು ಕೇಳಿಬಂದಿದೆ.

ಅಬ್ದುಲ್ ಅಮೀಬ್ ಬಂಧಿತ ವಿದ್ಯಾರ್ಥಿ. ನಗರದ ಯಲಹಂಕದ ಖಾಸಗಿ ಕಾಲೇಜಿನಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿದ್ದ ಅಬ್ದುಲ್ ಅಮೀಬ್‍ಗೆ ಅದೇ ಕ್ಲಾಸಿನಲ್ಲಿ ಓದುತ್ತಿದ್ದ ಯುವತಿಯೊಂದಿಗೆ ಸ್ನೇಹವಾಗಿತ್ತು. ಇಬ್ಬರು ಕೂಡ ಚೆನ್ನಾಗಿ ಓದುತ್ತಿದ್ದ ಕಾರಣ ಕಾಲೇಜಿನಲ್ಲಿ ಒಟ್ಟಿಗೆ ಓಡಾಡ್ತಿದ್ರು.

ಕಳೆದ ಎರಡು ದಿನಗಳ ಹಿಂದೆ ಹಮೀದ್‍ಗೆ ವಿದ್ಯಾರ್ಥಿನಿ ಅದೊಂದು ಬುಕ್ ಕೊಡುವಂತೆ ಕೇಳಿದ್ದಳು. ಬುಕ್ ರೂಮ್‍ನಲ್ಲಿ ಇದೆ ಕೊಡ್ತೀನಿ ಬಾ ಎಂದು ಕರೆದುಕೊಂಡು ಹೋಗಿ ರೂಮ್‍ನಲ್ಲೇ ವಿದ್ಯಾರ್ಥಿನಿಗೆ ಟೀ ಮಾಡಿಕೊಟ್ಟಿದ್ದನು. ಟೀ ಕುಡಿದ ತಕ್ಷಣ ವಿದ್ಯಾರ್ಥಿನಿ ಪ್ರಜ್ಞೆ ಕಳೆದುಕೊಂಡಿದ್ದಳು.

ಈ ವೇಳೆ ಹಮೀದ್ ವಿದ್ಯಾರ್ಥಿ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಟೀನಲ್ಲಿ ಮತ್ತು ಬರುವ ಔಷಧ ಹಾಕಿ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿನಿ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಬ್ದುಲ್ ಹಮೀದ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Comments are closed.