ಮಂಗಳೂರು ಫೆಬ್ರವರಿ 26 : ಕೊಣಾಜೆ ಗ್ರಾಮದ, ಅಸೈಗೋಳಿ ಕೇಂದ್ರ ಮೈದಾನದಲ್ಲಿ ನಡೆದ ವೀರ ರಾಣಿ ಅಬ್ಬಕ್ಕ ಕ್ರೀಡೋತ್ಸವದ ಫಲಿತಾಂಶ ಪ್ರಕಟವಾಗಿದ್ದು, ವಿಜೇತ ತಂಡಗಳ ವಿವರ ಈ ಕೆಳಗೆ ನೀಡಲಾಗಿದೆ.
ಮಹಿಳೆಯರ ತೋಬಾಲ್‍ನಲ್ಲಿ ಮಂಗಳೂರು ಯುರೋಪಿಯನ್ ಮೋಟರ್ಸ್ (ಪ್ರಥಮ ಸ್ಥಾನ), ಸುರತ್ಕಲ್ ಫ್ರೆಂಡ್ಸ್ (ದ್ವಿತೀಯ ಸ್ಥಾನ), ಮಂಗಳೂರು ಸ್ವೆಂಟ್ ಆಗ್ನೇಸ್ ಕಾಲೇಜು (ತೃತೀಯ ಸ್ಥಾನ), ಪೆರ್ಮನೂರು ಸರಕಾರಿ ಪ್ರೌಢ ಶಾಲೆ (ನಾಲ್ಕನೇ ಸ್ಥಾನ) ಪಡೆದುಕೊಂಡಿದೆ.
ಮಹಿಳೆಯರ ಹಗ್ಗಜಗ್ಗಾಟದಲ್ಲಿ ಬಂಟರ ಸಂಘ ಉಳ್ಳಾಲ ವಲಯ (ಪ್ರಥಮ ಸ್ಥಾನ), ರಂಜನಿ ಕ್ಲಬ್ (ದ್ವಿತೀಯ ಸ್ಥಾನ), ಮಂಗಳೂರು ಮುನೀಶ್ವರ ಮಹಾಗಣಪತಿ (ತೃತೀಯ ಸ್ಥಾನ), ಮಂಗಳೂರು ವೆಸ್ ಆರ್ಯನ್ (ನಾಲ್ಕನೇ ಸ್ಥಾನ) ಪಡೆದುಕೊಂಡಿದೆ.
ಪುರುಷರ ವಾಲಿಬಾಲ್ ವಿಭಾಗದಲ್ಲಿ ಮಂಗಳೂರು ಸ್ಟೇಡಿಯಂ ಫ್ರೆಂಡ್ಸ್ (ಪ್ರಥಮ ಸ್ಥಾನ), ಅಸೈಗೋಳಿ ಹುನುಮಾನ್ ಫ್ರೆಂಡ್ಸ್ (ದ್ವಿತೀಯ ಸ್ಥಾನ), ಅಸೈಗೋಳಿ ಹುನುಮಾನ್ ಫ್ರೆಂಡ್ಸ್ (ತೃತೀಯ ಸ್ಥಾನ), ಕೈರಂಗಳ ಎಸ್. ಕೆ.ಜಿ.ಇ (ನಾಲ್ಕನೇ ಸ್ಥಾನ) ಪಡೆದುಕೊಂಡಿದೆ.
ಪುರುಷರ ಹಗ್ಗಜಗ್ಗಾಟದಲ್ಲಿ ತೊಕ್ಕೊಟ್ಟು ಶಕ್ತಿಭಾರತ್ (ಪ್ರಥಮ ಸ್ಥಾನ), ಆಂಜನೇಯ ಫ್ರೆಂಡ್ಸ್ ಕ್ಲಬ್ (ದ್ವಿತೀಯ ಸ್ಥಾನ), ಫ್ರೆಂಡ್ಸ್ ಮೊಗರ್ನಾಡು (ತೃತೀಯ ಸ್ಥಾನ), ಫ್ರೆಂಡ್ಸ್ ಹೊಸಂಗಡಿ (ನಾಲ್ಕನೇ ಸ್ಥಾನ) ಪಡೆದುಕೊಂಡಿದೆ.

Comments are closed.