
ಚಿತ್ರದುರ್ಗ: ದೇಶ ವಿರೋಧ ಘೋಷಣೆ ಕೂಗಿದವರನ್ನು ಕಂಡಲ್ಲಿ ಗುಂಡಿಕ್ಕುವ ಕಾನೂನು ಜಾರಿಗೆ ಬರಬೇಕು ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಭಾನುವಾರ ಮಾತನಾಡಿದ ಅವರು, ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಕಿಡಿಕಾರಿದರು.
“ತಿನ್ನುವುದು ಭಾರತದ ಅನ್ನ, ಕುಡಿಯುವುದು ಭಾರತದ ನೀರು, ಹೀಗಿದ್ದರೂ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಹೇಳಿದರೆ ಅಂಥವರು ಏಕೆ ಇಲ್ಲಿರಬೇಕು? ಇಂತವರನ್ನು ಬಗ್ಗು ಬಡಿಯಲು ಕಂಡಲ್ಲಿ ಗುಂಡಿಟ್ಟು ಕೊಲ್ಲುವ ಕಾನೂನು ತರಲು ಪ್ರಧಾನಿ ಮೋದಿಯವರಿಗೆ ನಾನು ಒತ್ತಾಯಿಸುತ್ತೇನೆ” ಎಂದರು.
ಈ ವೇಳೆ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಸಿಗದೇ ಇರುವ ವಿಚಾರಕ್ಕೆ ಪ್ರತಿಕ್ರಿಯಿಸಿ, “ ಮಹೇಶ್ ಕುಮಟಳ್ಳಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರರದು. ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಿಎಂ ಬಿಎಸ್‌ವೈಗೆ ಒತ್ತಾಯ ಮಾಡುತ್ತೇನೆ. ಕುಮಟಳ್ಳಿಯವರು ತ್ಯಾಗ ಮಾಡಿದ್ದಾರೆ, ಅವರಿಗೆ ಸೂಕ್ತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಸಿಎಂಗೆ ಮನವಿ ಮಾಡುತ್ತೇನೆ” ಎಂದ ಅವರು ನ್ಯಾಯ ಸಿಗುವ ಭರವಸೆಯನ್ನು ವ್ಯಕ್ತಪಡಿಸಿದರು.
ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ನೀಡದೇ ಇದ್ದರೆ ರಾಜೀನಾಮೆ ನೀಡುವ ಎಚ್ಚರಿಕೆಯನ್ನು ಸಚಿವ ರಮೇಶ್ ಜಾರಕಿಹೊಳಿ ನೀಡಿದ್ದಾರೆ.
Comments are closed.