ಬೆಂಗಳೂರು:ಸ್ನೇಹಿತೆಯ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮಧ್ಯಪ್ರದೇಶ ಮೂಲದ ಯುವಕನನ್ನು ಕೆ.ಆರ್ ಪುರ ಪೊಲೀಸರು ಬಂಧಿಸಿದ್ದಾರೆ. ದೀಪಕ್ ಸೇರ್‌ಕರ್ ಬಂಧಿತ ಆರೋಪಿ.
ಖಾಸಗಿ ಕಂಪೆನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಬಿಹಾರ ಮೂಲದ ಯುವತಿ ನೀಡಿದ ದೂರಿನ ಅನ್ವಯ ಪ್ರಕರಣದ ತನಿಖೆ ನಡೆಸಿ ಆರೋಪಿ ದೀಪಕ್‌ನನ್ನು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ದೀಪಕ್ ಬೆಂಗಳೂರಿನಲ್ಲಿ ಬಿಎಸ್‌ಸಿ ಜೆನೆಟಿಕ್ಸ್ ಪದವಿ 2011ರಲ್ಲಿ ಪೂರ್ಣಗೊಳಿಸಿದ್ದು. ಈ ವೇಳೆ ಸಂತ್ರಸ್ತೆ ಸ್ನೇಹಿತೆಯಾಗಿದ್ದಳು. 2019ರಲ್ಲಿ ಆರೋಪಿ ದೀಪಕ್ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಸಂತ್ರಸ್ತೆ ಮತ್ತೆ ಸಂಪರ್ಕಕ್ಕೆ ಸಿಕ್ಕಿದ್ದಳು.
ಈ ಮಧ್ಯೆ ಅಕ್ಟೋಬರ್ ತಿಂಗಳಿನಲ್ಲಿ ದೀಪಕ್ ಹಾಗೂ ಸಂತ್ರಸ್ತೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದು ತಡರಾತ್ರಿ ಆಗಿತ್ತು. ಹೀಗಾಗಿ ತನ್ನ ಮನೆಯಲ್ಲಿಯೇ ಉಳಿದುಕೊಳ್ಳುವಂತೆ ಆಕೆಯನ್ನು ಕರೆತಂದಿದ್ದ. ಮನೆಗೆ ಬಂದಿದ್ದ ಆಕೆ ಸ್ನಾನ ಮಾಡುವಾಗ ಆಕೆಗೆ ಗೊತ್ತಿಲ್ಲದೆ ಮೊಬೈಲ್‌ನಲ್ಲಿ ವಿಡಿಯೋ ಮಾಡಿಟ್ಟುಕೊಂಡಿದ್ದಾನೆ.
ಇದಾದ ಬಳಿಕ ಸ್ವಂತ ಊರಾದ ಮಧ್ಯಪ್ರದೇಶದ ಬೆತುಲ್ ನಗರಕ್ಕೆ ಆರೋಪಿ ದೀಪಕ್ ವಾಪಾಸ್ ಹೋಗಿದ್ದು ಅಲ್ಲಿನ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಕೆಲ ದಿನಗಳ ಹಿಂದೆ ನಕಲಿ ಇ- ಮೇಲ್‌ವೊಂದನ್ನು ಸೃಷ್ಟಿಸಿದ್ದ ದೀಪಕ್ ಇನಾr$Õಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಮೆಸೇಜ್ ಮಾಡಿದ್ದ ಆಕೆ ಪ್ರತಿಕ್ರಿಯೆ ನೀಡಿರಲಿಲ್ಲ.
ಬಳಿಕ ಅದೇ ನಕಲಿ ಇಮೇಲ್‌ನಲ್ಲಿ ಡಿಸೆಂಬರ್ ತಿಂಗಳಲ್ಲಿ ಸಂತ್ರಸ್ತೆಗೆ ಖಾಸಗಿ ವಿಡಿಯೋ ಮೇಲ್ ಮಾಡಿ ಮುಂದಿನ 10 ದಿನಗಳಲ್ಲಿ ಮೂರು ಲಕ್ಷ ರೂ. ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ಈ ಕುರಿತು ದೀಪಕ್ ಗೆ ಸಂತ್ರಸ್ತೆಯ ಕರೆ ಮಾಡಿದಾಗ ತಾನೇ ಬ್ಲಾಕ್ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಜತೆಗೆ, ಪೊಲೀಸರಿಗೆ ದೂರು ನೀಡಬಹುದು ಎಂದು ಹೆದರಿ ತನ್ನ ಮೊಬೈಲ್ ಮೆಸೇಜ್ ಡಿಲೀಟ್ ಮಾಡಿದ್ದ. ಜತೆಗೆ ಸೃಷ್ಟಿ ಮಾಡಿದ್ದ ನಕಲಿ ಇ-ಮೇಲ್ ಐಡಿ ಕೂಡ ಡಿಲೀಟ್ ಮಾಡಿದ್ದ.
ಖಾಸಗಿ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬ್ಲಾಕ್ ಮಾಡಿದ ಆರೋಪ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕ್ಷಿಪ್ರಗೊಳಿಸಿದ ಇನ್ಸ್‌ಪೆಕ್ಟರ್ ಅಂಬರೀಶ್, ಪಿಎಸ್‌ಐ ಎಚ್, ಮಂಜುನಾಥ್, ಬೆತುಲ್‌ನಲ್ಲಿ ತಲೆಮರೆಸಿಕೊಂಡಿದ್ದ ದೀಪಕ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
Comments are closed.