ಅಂತರಾಷ್ಟ್ರೀಯ

ಭೂಗತ ಪಾತಕಿ ರವಿ ಪೂಜಾರಿ ಬಂಧನ- ಶೀಘ್ರವೇ ಭಾರತಕ್ಕೆ?

Pinterest LinkedIn Tumblr

ಬೆಂಗಳೂರು: ಕೆಲವು ಸಮಯಗಳ ಹಿಂದೆ ಸೆನೆಗಲ್ ನಲ್ಲಿ ಬಂಧನವಾಗಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ರಾಜ್ಯಕ್ಕೆ ಕರೆತರಲು ತೊಡಕಾಗಿದ್ದ ಕೆಲ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿದ್ದು,ಶೀಘ್ರದಲ್ಲಿಯೇ ಆರೋಪಿಯನ್ನು ಸೆನಗಲ್ ದೇಶದಿಂದ ರಾಜ್ಯಕ್ಕೆ ಕರೆತರಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.ಈ ಸಂಬಂಧ ಹಿರಿಯ ಅಧಿಕಾರಿಗಳ ತಂಡ ಶೀಘ್ರ ಸೆನಗಲ್ ದೇಶಕ್ಕೆ ತರಳಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಕೆಲವು ಸಮಯಗಳ ಹಿಂದೆ ಬಂಧನವಾಗಿದ್ದ ರವಿ ಪೂಜಾರಿ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಜಾಮೀನು ಪಡೆದು ಲಂಡನ್‌ ಗೆ ಪಲಾಯನ ಮಾಡಿದ್ದ ಎಂದು ಸುದ್ದಿಗಳು ಹರಡಿತ್ತು. ಆದರೆ ಈಗ ಎಲ್ಲಾ ವದಂತಿಗಳಿಗೆ ತೆರೆ ಬಿದ್ದದೆ.ರವಿ ಪೂಜಾರಿ ಎಲ್ಲೂ ಪರಾರಿಯಾಗಿಲ್ಲ.ಸೆನೆಗಲ್ ನಲ್ಲಿ ಜಾಮೀನಿನಿಂದ ಹೊರಗಡೆ ಬಂದಿದ್ದ,ಈಗ ಪುನಃ ಆತನ ಬಂಧನವಾಗಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಹಿರಿಯ ಅಧಿಕಾರಿಗಳ ತಂಡ ಶೀಘ್ರ ಸೆನಗಲ್ ದೇಶಕ್ಕೆ ತರಳಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.ಸೆನಗಲ್ ದೇಶದ ಜೊತೆಗೆ ಭಾರತಕ್ಕೆ ಒಪ್ಪಂದ ಹಿನ್ನೆಲೆಯಲ್ಲಿ ರವಿ ಪೂಜಾರಿ ಬಂಧನಕ್ಕೆ ತೊಡಕಾಗಿತ್ತು.

ಇದೀಗ ರವಿ ಪೂಜಾರಿಯನ್ನು ರಾಜ್ಯಕ್ಕೆ ಕರೆತರುವ ಸಂಬಂಧ ಕಾನೂನು ಪ್ರಕ್ರಿಯೆಗಳು ನಿವಾರಣೆಯಾಗಿದೆ. ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಪೊಲೀಸರ ತಂಡ ಸೆನಗಲ್’ಗೆ ತೆರಳಿದ್ದಾರೆ. ಸದ್ಯದಲ್ಲಿ ಆತನನ್ನು ರಾಜ್ಯಕ್ಕೆ ಕರೆ ತರುವ ಸಾಧ್ಯತೆಯಿದೆ ಇದೆ ಎಂದು ಮೂಲಗಳು ಮಾಹಿತಿ ನೀಡಿವೆ.

ವಿದೇಶದಲ್ಲಿ ಅಡಗಿ ಕುಳಿತಿರುವ ಭೂಗತ ಪಾತಕಿ ರವಿ ಪೂಜಾರಿ ಉದ್ಯಮಿಗಳು ಮತ್ತು ರಾಜಕಾರಣಿಗಳಿಗೆ ಕರೆ ಮಾಡಿ ಹಣ (ಹಪ್ತಾ) ನೀಡುವಂತೆ ಬೆದರಿಕೆವೊಡ್ಡುತ್ತಿದ್ದ. ಈತನ ವಿರುದ್ಧ ಮುಂಬಯಿ,ಹೈದರಾಬಾದ್,ದೆಹಲಿ, ಬೆಂಗಳೂರಿನಲ್ಲಿ 39, ಮಂಗಳೂರಿನಲ್ಲಿ 36, ಉಡುಪಿಯಲ್ಲಿ 11 ಮತ್ತು ಮೈಸೂರು, ಹುಬ್ಬಳ್ಳಿ-ಧಾರವಾಡ, ಕೋಲಾರ ಮತ್ತು ಶಿವಮೊಗ್ಗದಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಪೊಲೀಸರು ಮೊದಲು ಆತನನ್ನು ಬೆಂಗಳೂರಿಗೆ ಕರೆ ತಂದು ವಿಚಾರಣೆ ನಡೆಸಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Comments are closed.